ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದಕರನ್ನು ನಾಶಗೊಳಿಸ್ತೇವೆ: ಪುಟಿನ್ ಶಪಥ (Russia | Vladimir Putin | Moscow metro attack | Moscow)
Bookmark and Share Feedback Print
 
ನಗರದ ಎರಡು ಕಡೆಗಳಲ್ಲಿ ಬಾಂಬ್ ಸ್ಫೋಟ ನಡೆಸಿರುವ ಉಗ್ರರ ಕೃತ್ಯವನ್ನು ಬಲವಾಗಿ ಖಂಡಿಸಿರುವ ರಷ್ಟಾ ಪ್ರಧಾನಿ ವ್ಲಾಡಿಮಿರ್ ಪುಟಿನ್, ಭಯೋತ್ಪಾದಕರನ್ನು ನಾಶಗೊಳಿಸುವುದಾಗಿ ಈ ಸಂದರ್ಭದಲ್ಲಿ ಶಪಥಗೈದಿದ್ದಾರೆ.

ಮಾಸ್ಕೋ ಸೆಂಟ್ರಲ್ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಸೈಬಿರಿಯಾಕ್ಕೆ ತೆರಳುತ್ತಿದ್ದ ಅವರು ಪ್ರಯಾಣವನ್ನು ಮೊಟಕುಗೊಳಿಸಿ ನಗರಕ್ಕೆ ವಾಪಸಾದ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇಂದು ನಡೆದಿರುವ ಈ ಘಟನೆ ನಿಸರ್ಗಕ್ಕೆ ವಿರುದ್ಧವಾದದ್ದು ಮತ್ತು ಅತ್ಯಂತ ಕ್ರೂರವಾದದ್ದು, ಇದು ಮಾಸ್ಕೋ ಜನರು ಶಾಂತಿಯಿಂದ ಇರಲು ವಿರುದ್ಧವಾದಂತಹ ಘಟನೆ ಎಂದು ಹೇಳಿದರು. ಆ ನಿಟ್ಟಿನಲ್ಲಿ ನಮ್ಮ ಕಾನೂನು ಏಜೆನ್ಸಿ ಖಂಡಿತವಾಗಿಯೂ ಆರೋಪಿಗಳನ್ನು ಪತ್ತೆ ಹಚ್ಚಿ, ಶಿಕ್ಷಿಸುವುತ್ತೆ ಎಂದು ಟೆಲಿವಿಷನ್ ಹೇಳಿಕೆಯಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ರೈಲ್ವೆ ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುವ ಸ್ಥಳಗಳಲ್ಲಿ ಕಟ್ಟು ನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳುವಂತೆಯೂ ಅವರು ಈ ಸಂದರ್ಭದಲ್ಲಿ ಸಾರಿಗೆ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ.

ಸೋಮವಾರ ಬೆಳಿಗ್ಗೆ ರಷ್ಯಾದ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಪ್ರಬಲ ಅವಳಿ ಬಾಂಬ್ ಸ್ಫೋಟಗೊಂಡ ಪರಿಣಾಮ 36ಮಂದಿ ಸಾವನ್ನಪ್ಪಿದ್ದರು. ಈ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 7ಮಿಲಿಯನ್ ಜನರು ಪ್ರಯಾಣಿಸುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ