ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮ್ಯಾನ್ಮಾರ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸೂ ಕೀ (Suu Kyi | Myanmar elections | military rulers | National League for Democracy)
Bookmark and Share Feedback Print
 
ಮಿಲಿಟರಿ ಆಡಳಿತಾರೂಢ ಜುಂಟಾ ಸರ್ಕಾರದ ನೂತನ ಚುನಾವಣಾ ನೀತಿಯನ್ನು ವಿರೋಧಿಸುವುದಾಗಿ ಹೇಳಿರುವ ಮ್ಯಾನ್ಮಾರ್ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂ ಕೀ, ಪ್ರಸಕ್ತ ಸಾಲಿನ ಅಂತ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಜುಂಟಾ ಸರ್ಕಾರದ ವಿವಾದಿತ ನೀತಿಯನ್ನು ತೀವ್ರವಾಗಿ ವಿರೋಧಿಸಿರುವ ಬಂಧಿತ ಸೂ ಕೀಯ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಚುನಾವಣೆಯನ್ನು ಬಹಿಷ್ಕರಿಸಲು ಪಕ್ಷದ ಸಭೆಯಲ್ಲಿ ತೀರ್ಮಾನಿಸಿದೆ. ಎರಡು ದಶಕಗಳ ನಂತರ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿಟ್ಟಿನಲ್ಲಿ ಪಕ್ಷದ ಹೆಸರನ್ನು ರಿಜಿಸ್ಟ್ರರ್ ಮಾಡುವುದಿಲ್ಲ ಎಂದು ಹೇಳಿದೆ.

ಪ್ರಜಾಪ್ರಭುತ್ವ ಧೋರಣೆಯನ್ನು ಧಿಕ್ಕರಿಸಿ ಪಕ್ಷದ ವರಿಷ್ಠೆ ಸೂ ಕೀಯನ್ನು ಬಂಧನದಲ್ಲಿ ಇರಿಸುವ ಜುಂಟಾದ ಕ್ರಮವನ್ನು ಖಂಡಿಸಿದೆ. ಹಾಗಾಗಿ ತಾವು ಪಕ್ಷದ ಹೆಸರನ್ನು ಚುನಾವಣೆಗೆ ಸ್ಪರ್ಧಿಸಲು ದಾಖಲಿಸುವುದಿಲ್ಲ ಎಂದು ಎನ್‌ಎಲ್‌ಡಿ ವಕ್ತಾರ ನೈನ್ ವಿನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ