ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೋಮಾಲಿ ಕಡಲ್ಗಳ್ಳರ ವಶದಲ್ಲಿ 120 ಭಾರತೀಯ ನಾವಿಕರು (Somali pirates | Indians sailors | hijacking | Somalia)
Bookmark and Share Feedback Print
 
ಸೋಮಾಲಿ ಕಡಲ್ಗಳ್ಳರು ಎಂಟು ಬೋಟ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಸುಮಾರು 120ಮಂದಿ ಭಾರತೀಯ ಸಿಬ್ಬಂದಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮಾಲಿಯಾದಿಂದ ದುಬೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಡಲ್ಗಳ್ಳರು ಈ ಬೋಟ್‌ಗಳನ್ನು ಅಪಹರಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬಂಧಿತರನ್ನು ಕಡಲ್ಗಳ್ಳರಿಂದ ಕೂಡಲೇ ಬಂಧಮುಕ್ತಗೊಳಿಸುವಂತೆ ಸರ್ಕಾರ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿರುವುದಾಗಿ ಕಡಲ್ಗಳ್ಳರ ಬಳಿ ಒತ್ತೆಯಾಳಾಗಿರುವ ಸಿಬ್ಬಂದಿಯೊಬ್ಬರ ಸಂಬಂಧಿ ಟೈಮ್ಸ್ ನೌಗೆ ತಿಳಿಸಿರುವುದಾಗಿ ಹೇಳಿದೆ.

ಸೋಮಾಲಿಯಾದ ಕಿಸ್‌ಮಾಯೋ ಬಂದರಿನಲ್ಲಿ ಭಾರತೀಯ ಹಡಗುಗಳು ಸರಕನ್ನು ತುಂಬಿಸಿಕೊಂಡು ಹೊರಟಿತ್ತು. ಆದರೆ ಬಂದರಿನಿಂದ ಹೊರಟ ನಂತರ ಕಡಲ್ಗಳ್ಳರು ಹಡಗನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಕಡಲ್ಗಳ್ಳರು ಈವರೆಗೂ ಯಾವುದೇ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ.

ಭಾರತೀಯ ಹಡಗುಗಳನ್ನು ಕಡಲ್ಗಳ್ಳರು ವಶಪಡಿಸಿಕೊಂಡಿರುವ ವಿಷಯವನ್ನು ಭಾರತೀಯ ನೌಕದಳ ಕೂಡ ಖಚಿತಪಡಿಸಿದೆ. ಆ ನಿಟ್ಟಿನಲ್ಲಿ ಒತ್ತೆಯಾಳಾಗಿರುವ ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಿ ವಾಪಸು ಕರೆ ತರಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ