ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾ ಅವಳಿ ಸ್ಫೋಟದ ಹಿಂದೆ ಪಾಕ್-ಅಫ್ಘಾನ್ ಉಗ್ರರು? (Moscow bomber | Pakistan | Afghan | suicide bombers | militants)
Bookmark and Share Feedback Print
 
ಮಾಸ್ಕೋದಲ್ಲಿ ಸೋಮವಾರ ಸಂಭವಿಸಿದ ಅವಳಿ ಸ್ಫೋಟದ ಹಿಂದೆ ಪಾಕಿಸ್ತಾನ-ಅಫ್ಘಾನಿಸ್ತಾನ್ ಗಡಿಭಾಗದ ಉಗ್ರರ ಕೈವಾಡ ಇರುವುದಾಗಿ ಶಂಕಿಸಲಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್‌ರೊವ್ ತಿಳಿಸಿದ್ದಾರೆ.

ವಿದೇಶಾಂಗ ಸಚಿವರ ಶೃಂಗಸಭೆಗಾಗಿ ಕೆನಡಾಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸೋಮವಾರ ರಷ್ಯಾದಲ್ಲಿ ಸಂಭವಿಸಿದ ಎರಡು ಸ್ಫೋಟದಲ್ಲಿ 38ಜನರು ಸಾವನ್ನಪ್ಪಿದ್ದರು.

ಇಬ್ಬರು ಮಹಿಳಾ ಆತ್ಮಹತ್ಯಾ ಬಾಂಬರ್ ಮಾಸ್ಕೋದ ಲುಬ್ಯಾಂಕಾ ಮತ್ತು ಪಾರ್ಕ್ ಕುಲ್‌ಟುರೆ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ತಮ್ಮನ್ನು ತಾವೇ ಸ್ಫೋಟಿಸಿಕೊಳ್ಳುವ ಮೂಲಕ ಈ ಘಟನೆ ಸಂಭವಿಸಿತ್ತು.

ರಷ್ಯಾದಲ್ಲಿ ನಡೆದಿರುವ ಸ್ಫೋಟಕ್ಕೆ ಪಾಕ್-ಅಫ್ಘಾನ್ ಭಾಗದ ಉಗ್ರರೇ ಇಲ್ಲಿನ ಇಸ್ಲಾಮಿಕ್ ಉಗ್ರರಿಗೆ ನೆರವು ನೀಡಿದ್ದಾರೆಂದು ಅವರು ಗಂಭೀರವಾಗಿ ಆರೋಪಿಸಿದರು.

ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ರಷ್ಯಾ ಸರ್ಕಾರಕ್ಕೆ ವಿಶ್ವದ ನಾಯಕರು ಮತ್ತು ಜಿ8 ಪೂರ್ಣ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ವಿದೇಶಾಂಗ ಸಚಿವರು ಕೃತಜ್ಞತೆ ಅರ್ಪಿಸಿದ್ದಾರೆ.

ಸಂಭಾವ್ಯ ಭಯೋತ್ಪಾದನಾ ದಾಳಿಯ ಬಗ್ಗೆ ನಾವು ಅರಿತಿದ್ದೇವೆ. ಪಾಕ್-ಅಫ್ಘಾನಿಸ್ತಾನ ಉಗ್ರರಿಂದ ಜಾಗತಿಕವಾಗಿ ಅಪಾಯ ಎದುರಾಗಿದೆ. ಆ ನಿಟ್ಟಿನಲ್ಲಿ ಈ ಉಗ್ರರನ್ನು ಮಟ್ಟಹಾಕಲು ಜಾಗತಿಕ ಸಮುದಾಯ ಕೂಡ ಕೈಜೋಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ