ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊನೆಗೂ 'ಬಿಗ್ ಬ್ಯಾಂಗ್' ಮಹಾಸ್ಫೋಟ ಪ್ರಯೋಗ ಯಶಸ್ವಿ (Swiss | French border | Geneva | Big Bang | Large Hadron Collider | scientists)
Bookmark and Share Feedback Print
 
PTI
2008ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಿ ತಾಂತ್ರಿಕ ತೊಂದರೆಗಳಿಂದ ಸ್ಥಗಿತಗೊಂಡಿದ್ದ ವಿಶ್ವದ ಅತೀ ದೊಡ್ಡ ಮಹಾಸ್ಫೋಟದ ಪ್ರಯೋಗಕ್ಕೆ ಜಿನೆವಾದ ಸ್ವಿಸ್ ಮತ್ತು ಮತ್ತು ಫ್ರೆಂಚ್ ಗಡಿಭಾಗದಲ್ಲಿ ವಿಜ್ಞಾನಿಗಳ ತಂಡ ಮಂಗಳವಾರ ಮತ್ತೆ ಚಾಲನೆ ನೀಡುವ ಮೂಲಕ ಯಶಸ್ವಿಯಾಗಿ ಶುಭಾರಂಭಗೊಂಡಿದೆ. ಇಂದಿನ ಪ್ರಯೋಗದ ಸಂದರ್ಭದ ಆರಂಭದಲ್ಲಿಯೂ ತಾಂತ್ರಿಕ ದೋಷದಿಂದಾಗಿ ಪ್ರಯೋಗ ವಿಳಂಬವಾಗಿತ್ತು.

ವಿಜ್ಞಾನ ಲೋಕದಲ್ಲಿಯೇ ಹೊಸದೊಂದು ಇತಿಹಾಸವನ್ನು ಮತ್ತೊಮ್ಮೆ ಸೃಷ್ಟಿಸಲು ಹೊರಟಿರುವ ವಿಜ್ಞಾನಿಗಳ ತಂಡ 18ತಿಂಗಳ ನಂತರ ವಿಶ್ವದ ಬೃಹತ್ ವೈಜ್ಞಾನಿಕ ಮಹಾಪ್ರಯೋಗ ನಡೆಸಿ ಯಶಸ್ವಿಯಾಗಿದೆ. ಇದರಿಂದಾಗಿ ವೈಜ್ಞಾನಿಕವಾಗಿ ಈವರೆಗೂ ಉತ್ತರ ಸಿಗದ ಪ್ರಶ್ನೆಗಳಿಗೆ ಪರಿಹಾರ ದೊರೆಯಲಿದೆ ಎಂಬುದು ವಿಜ್ಞಾನಿಗಳ ನಿರೀಕ್ಷೆಯಾಗಿದೆ.

ದಿನದ ಆರಂಭದಿಂದಲೂ ಸಾಕಷ್ಟು ಪ್ರಯತ್ನಿಸಿ ಕೊನೆಗೂ ಪ್ರಯೋಗ ಯಶಸ್ವಿಗೊಂಡಿದೆ. ಬೆಳಕಿನ ವೇಗದಲ್ಲಿ ಪ್ರೋಟಾನ್ ಕಣಗಳ ಘರ್ಷಣೆ ನಡೆಸಿ ಈ ಮಹಾಪ್ರಯೋಗ ಕೈಗೊಳ್ಳಲಾಗಿದೆ. ಲಾರ್ಜ್ ಹೈಡ್ರಾನ್ ಕೊಲೈಡರ್ ಬಳಸಿ ಘರ್ಷಣೆ ನಡೆಸಲಾಗಿತ್ತು. ಪ್ರೋಟಾನ್ ಕಣಗಳನ್ನು ವಿರುದ್ಧ ದಿಕ್ಕಿನಲ್ಲಿ ಹಾಯಿಸಿ ಘರ್ಷಣೆ ನಡೆಸುವ ಮೂಲಕ ಪ್ರಯೋಗ ಯಶಸ್ವಿ ಕಂಡಿದೆ.

ಇದೀಗ ಅತೀ ದುಬಾರಿ ಪ್ರಯೋಗ ವಿಜ್ಞಾನಿಗಳ ಪಾಲಿಗೆ ಮಹತ್ತರವಾದ ಜಯ ಸಿಕ್ಕಂತಾಗಿದೆ. ಆ ನಿಟ್ಟಿನಲ್ಲಿ 'ಗಾರ್ಡ್ ಪಾರ್ಟಿಕಲ್' ಎಂಬ ದೈವೀ ಕಣಕ್ಕಾಗಿ ವಿಜ್ಞಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದೇ ರೀತಿ ಹಿಗ್ಸ್ ಬೋಸ್ ಕಣಕ್ಕಾಗಿಯೂ ನಿರೀಕ್ಷೆ ಹೊತ್ತಿದ್ದಾರೆ.

ವಿಶ್ವದ ಖಗೋಳ ರಚನಾ ಪ್ರಕ್ರಿಯೆ ವೇಳೆಯಲ್ಲಿ ಆಗಿದ್ದ ರೀತಿಯಲ್ಲೇ ಮಹಾಸ್ಫೋಟವೊಂದನ್ನು ಮರು ಸೃಷ್ಟಿಸಿ, ಆ ಮೂಲಕ ವಿಶ್ವದ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವ ಕೌತುಕದ ಅಧ್ಯಯನ ಇದಾಗಿದೆ. ಇದೀಗ 27ಕಿ.ಮೀ.ಉದ್ದದ ಸುರಂಗದಲ್ಲಿ ನಿರ್ಮಿಸಿದ್ದ ಹ್ಯಾಡ್ರನ್ ಕೊಲೈಡರ್‌ಗೆ ಅರ್ಧ ಸರ್ಕ್ಯೂಟ್‌ಗೆ ಸಾಕಾಗುವಷ್ಟು ಕಣಗಳನ್ನು ತುಂಬುವುದಕ್ಕೆ ಮಂಗಳವಾರ ಬೆಳಿಗ್ಗೆ ಚಾಲನೆ ನೀಡಲಾಗಿತ್ತು. ಅಲ್ಲದೇ 17ಮೈಲ್ ಉದ್ದದ ಸುರಂಗ ಮಾರ್ಗದಲ್ಲಿ ಕಳೆದ ಹತ್ತು ದಿನಗಳ ಹಿಂದೆಯೇ ಎರಡು ಪ್ರೋಟಾನ್ಸ್ ಕಿರಣಗಳನ್ನು ವಿರುದ್ಧ ದಿಕ್ಕಿನಲ್ಲಿ ಹಾಯಿಸಲು ಆರಂಭಿಸಿತ್ತು.

ಈ ಹಿಂದೆ 2008ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್ ಮತ್ತು ಸ್ವಿಜರ್ಲ್ಯಾಂಡ್‌ನ ಗಡಿಭಾಗದಲ್ಲಿ ಈ ವೈಜ್ಞಾನಿಕ ಮಹಾಪ್ರಯೋಗ ನಡೆದಿತ್ತು. ಜಗತ್ತಿನ ಸಾವಿರಾರು ವಿಜ್ಞಾನಿಗಳು, ತಂತ್ರತಜ್ಞರು ಈ ಬಿಗ್ ಬ್ಯಾಂಗ್ ಮಹಾಪ್ರಯೋಗದಲ್ಲಿ ಕೈ ಜೋಡಿಸಿದ್ದರು. ಈ ಪ್ರಯೋಗಕ್ಕೆ ಖರ್ಚಾದ ಒಟ್ಟು ಹಣ 33ಸಾವಿರ ಕೋಟಿ ರೂಪಾಯಿ. ಭಾರತ ಸೇರಿದಂತೆ ಜಾಗತಿಕವಾಗಿ 85ದೇಶಗಳು ಈ ಪ್ರಯೋಗಕ್ಕೆ ಬೆಂಬಲ ನೀಡಿದ್ದವು. ಆದರೆ ಆ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಪರಿಣಾಮ ಮಹಾಸ್ಫೋಟ ಪ್ರಯೋಗ ವಿಫಲವಾಗುವ ಮೂಲಕ ವಿಜ್ಞಾನಿಗಳ ಕುತೂಹಲಕ್ಕೆ ತಡೆ ಬಿದ್ದಿತ್ತು.

ತದನಂತರ ಪಟ್ಟು ಬಿಡದ ವಿಜ್ಞಾನಿಗಳು ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಯಂತ್ರವನ್ನು ರಿಪೇರಿ ಮಾಡಲು ಆರಂಭಿಸಿತ್ತು. ಅದಕ್ಕಾಗಿ ತಗುಲಿದ ವೆಚ್ಚ 40ಮಿಲಿಯನ್ ಅಮೆರಿಕನ್ ಡಾಲರ್. 2009ರ ನವೆಂಬರ್‌ನಲ್ಲಿ ರಿಪೇರಿ ಕೆಲಸ ಪೂರ್ಣಗೊಂಡು, ಮೆಶಿನ್ ಅನ್ನು ಮಹಾಪ್ರಯೋಗಕ್ಕೆ ತಯಾರು ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ