ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಮಿಲಿಟರಿ ಕಾರ್ಯಾಚರಣೆಗೆ 28 ಉಗ್ರರು ಬಲಿ (Orakzai | Pakistan | Taliban | military offensive | helicopter gunships)
Bookmark and Share Feedback Print
 
ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಬುಡಕಟ್ಟು ಪ್ರದೇಶವಾದ ಓರ್‌ಕಜೈನಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ ಪರಿಣಾಮ ಕನಿಷ್ಠ 28ಉಗ್ರರು ಹತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಲಿಬಾನ್ ಉಗ್ರರ ವಿರುದ್ಧ ಪಾಕಿಸ್ತಾನ ಮಿಲಿಟರಿ ಕೈಗೊಂಡಿರುವ ಹೊಸ ಕಾರ್ಯಾಚರಣೆಯಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು 150 ಉಗ್ರರು ಸಾವನ್ನಪ್ಪಿದ್ದಾರೆ. ಯುದ್ಧ ವಿಮಾನ ಉದುರಿಸಿದ ಬಾಂಬ್ ದಾಳಿಗೆ 20ಉಗ್ರರು ಸಾವನ್ನಪ್ಪಿರುವುದಾಗಿ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

ದಾಳಿಯಲ್ಲಿ ಹತ್ತು ಮಂದಿ ಉಗ್ರರು ಗಾಯಗೊಂಡಿರುವುದಾಗಿ ಮೂಲವೊಂದು ತಿಳಿಸಿರುವುದಾಗಿ ಓರ್‌ಕಜೈ ಬುಡಕಟ್ಟು ಪ್ರದೇಶ ಏಜೆನ್ಸಿ ಹೇಳಿದೆ. ಅಲ್ಲದೇ ಓರ್‌ಕಜೈ ಪ್ರದೇಶದ ಅಂಜಾನಿ ಪ್ರದೇಶದಲ್ಲಿ ನಡೆಸಿದ ಮತ್ತೊಂದು ದಾಳಿಯಲ್ಲಿ ಎಂಟು ಮಂದಿ ಉಗ್ರರು ಬಲಿಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ