ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ-ನಾನು ಆರೋಪಿಯಲ್ಲ: ರಾಣಾ ಪುನರುಚ್ಚಾರ (Rana | Hussain Rana | Pakistan | Mumbai terror attacks,)
Bookmark and Share Feedback Print
 
ವಾಣಿಜ್ಯ ನಗರಿ ಮುಂಬೈ ಭಯೋತ್ಪಾದನಾ ದಾಳಿ ಸಂಚಿನ ರೂವಾರಿಯಾಗಿರುವ ಶಂಕಿತ ಉಗ್ರ ತಹಾವೂರ್ ರಾಣಾ ವಿಚಾರಣಾಧೀನ ನ್ಯಾಯಾಲಯದಲ್ಲಿ, ತಾನು ಅಪರಾಧಿ ಅಲ್ಲ ಎಂಬ ತನ್ನ ನಿಲುವನ್ನು ಮುಂದುವರಿಸಿದ್ದಾನೆ.

ಅಮೆರಿಕ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಾದ ಪಾಕಿಸ್ತಾನ ಮೂಲದ ಪ್ರಜೆಯಾದ ರಾಣಾ(49), ತನ್ನ ಹಿಂದಿನ ನಿಲುವಿನಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ ಎಂದು ಅವರ ಪರ ವಕೀಲ ಪ್ಯಾಟ್ರಿಕ್ ಬ್ಲೆಗೆನ್ ಹೇಳಿದ್ದಾರೆ.

ಸೋಮವಾರ ಸುಮಾರು 20ನಿಮಿಷಗಳ ಕಾಲ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಹ್ಯಾರಿ ಲೈನೆನೆ ವೆಬ್ಬರ್ ಮುಂದೆ ಹಾಜರುಪಡಿಸಲಾಗಿತ್ತು. ಮುಂದಿನ ವಿಚಾರಣೆ ಮೇ 11ರಂದು ನಡೆಯಲಿದ್ದರೂ ಕೂಡ, ಕೆಲವೊಂದು ಸಾಕ್ಷ್ಯಾಧಾರಗಳು ಕೋರ್ಟ್‌ಗೆ ಹಾಜರುಪಡಿಸುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.

ಲಷ್ಕರ್ ಇ ತೊಯ್ಬಾದ ಸಹ ಆರೋಪಿಯಾಗಿರುವ ಡೇವಿಡ್ ಕೋಲ್‌ಮನ್ ಹೆಡ್ಲಿ ಮುಂಬೈ ದಾಳಿ ಸಂಚಿನಲ್ಲಿ ತಾನು ತಾನು ಆರೋಪಿ ಎಂದು ಮಾರ್ಚ್ 18ರಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದ. ಅಲ್ಲದೇ ಆರೋಪ ಎದುರಿಸುತ್ತಿರುವ ರಾಣಾಗೂ ಕೂಡ 15ವರ್ಷಗಳ ಕಾಲ ಜೈಲುಶಿಕ್ಷೆಯಾಗುವ ಸಾಧ್ಯತೆ ಇದೆ.
ಸಂಬಂಧಿತ ಮಾಹಿತಿ ಹುಡುಕಿ