ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಲ್‌ಟಿಟಿಇಯ ಚಿನ್ನ, ಹಣ ಏನು ಮಾಡಿದ್ರಿ?: ಲಂಕಾಕ್ಕೆ ವಿಪಕ್ಷ (LTTE | Sri Lanka | gold | Basil Rajapaksa | UNP | Tamil Tigers)
Bookmark and Share Feedback Print
 
ಲಂಕಾ ಮಿಲಿಟರಿಯಿಂದ ಎಲ್‌ಟಿಟಿಇ ಸಂಪೂರ್ಣವಾಗಿ ಪರಾಜಯಗೊಂಡ ನಂತರ ಅಪಾರ ಪ್ರಮಾಣದಲ್ಲಿ ಚಿನ್ನ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿತ್ತು, ಆದರೆ ಲಂಕಾ ಸರ್ಕಾರ ಆ ಬಗ್ಗೆ ಯಾವ ವಿವರಣೆಯನ್ನೂ ಕೊಟ್ಟಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ, ವಶಪಡಿಸಿಕೊಂಡ ಚಿನ್ನ ಮತ್ತು ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಇಡಲಾಗಿದೆ ಎಂದು ತಿಳಿಸಿದೆ.

ಎಲ್‌ಟಿಟಿಇ ಅಡಗುತಾಣದಿಂದ ವಶಪಡಿಸಿಕೊಂಡ ಹಲವಾರು ಕಿಲೋಗಳಷ್ಟು ಚಿನ್ನ ಮತ್ತು ಅಪಾರ ಪ್ರಮಾಣದ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಇಡಲಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷರ ಹಿರಿಯ ಸಲಹೆಗಾರ ಬಾಸಿಲ್ ರಾಜಪಕ್ಸೆ ಪ್ರತಿಪಕ್ಷಗಳ ಆರೋಪಕ್ಕೆ ವಿವರಣೆ ನೀಡಿದ್ದಾರೆ.

ಮಿಲಿಟರಿ ಕಾರ್ಯಾಚರಣೆಯಲ್ಲಿ ಎಲ್‌ಟಿಟಿಇ ನಾಮಾವಶೇಷಗೊಂಡ ನಂತರ, ಅಪಾರ ಪ್ರಮಾಣದ ಹಣ, ಚಿನ್ನವನ್ನು ಪತ್ತೆ ಹಚ್ಚಲಾಗಿತ್ತು. ಅದನ್ನು ಮಿಲಿಟರಿಗೆ ಹಸ್ತಾಂತರಿಸಲಾಗಿದ್ದು, ಅದನ್ನು ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದು ಪಶ್ಚಿಮದ ಗಾಂಪಾ ಪ್ರದೇಶದಲ್ಲಿನ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತ ತಿಳಿಸಿದರು.

ಲಂಕಾದ ವಿರೋಧಪಕ್ಷವಾದ ಯುಎನ್‌ಪಿ, ಶ್ರೀಲಂಕಾ ಸರ್ಕಾರ ಎಲ್‌ಟಿಟಿಇಯಿಂದ ಅಪಾರ ಪ್ರಮಾಣದಲ್ಲಿ ಚಿನ್ನ, ಹಣ ವಶಪಡಿಸಿಕೊಂಡಿದ್ದರೂ ಕೂಡ ಆ ಬಗ್ಗೆ ಯಾವ ಮಾಹಿತಿಯನ್ನೂ ಕೊಟ್ಟಿಲ್ಲ ಎಂದು ಗಂಭೀರವಾಗಿ ಆರೋಪಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ