ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೈಕೊಟ್ಟ ಪ್ರಿಯತಮೆ;ಮರ್ಮಾಂಗವನ್ನೇ ಕತ್ತರಿಸಿ ಎಸೆದ ಪ್ರೇಮಿ! (cuts off own penis | Indonesia | girlfriend | Jakarta,)
Bookmark and Share Feedback Print
 
ಪ್ರೀತಿಗಾಗಿ ತಾಜ್‌ಮಹಲ್ ಕಟ್ಟಿಸಿದ ಷಹಜಹಾನ್‌ನ ಬಗ್ಗೆ ಕೇಳಿದ್ದೇವೆ...ಒಬ್ಬೊರನ್ನೊಬ್ಬರು ಅಗಲಲಾರದೆ ಸಾವಿಗೆ ಶರಣಾದ ಹುಚ್ಚು ಪ್ರೇಮಿಗಳ ಬಗ್ಗೆ, ರೋಮಿಯೋ-ಜೂಲಿಯೆಟ್ ಅಮರ ಪ್ರೇಮಿಗಳ ಬಗ್ಗೆಯೂ ಗೊತ್ತು. ಆದರೆ ಇದೊಂದು ಭಗ್ನ ಪ್ರೇಮಿಯ ವಿಚಿತ್ರ ಕಥೆ!

ಪ್ರಿಯತಮೆ ಬೇರೊಬ್ಬನನ್ನು ಮದುವೆಯಾಗಲು ನಿರ್ಧರಿಸಿದ್ದರಿಂದ ಆಕ್ರೋಶಗೊಂಡ ಇಂಡೋನೇಷ್ಯಾದ ಪ್ರಿಯತಮ ತನ್ನ ಶಿಶ್ನವನ್ನೇ ಕತ್ತರಿಸಿ ಬಾವಿಗೆ ಎಸೆದು ಆತ್ಮಹತ್ಯೆಗೂ ಯತ್ನಿಸಿದ ಘಟನೆ ನಡೆದಿರುವುದಾಗಿ ಸ್ಥಳೀಯ ಮಾಧ್ಯಮ ವರದಿಯೊಂದು ತಿಳಿಸಿದೆ.

ಕೇಂದ್ರ ಜಾವಾ ಪ್ರಾಂತ್ಯದ ಸಿಲಕ್ಯಾಪ್ ಜಿಲ್ಲೆಯಿಂದ ರಕ್ತದ ಮಡುವಿನಲ್ಲೇ ಆಸ್ಪತ್ರೆಗೆ ಧಾವಿಸಿದ 19ರ ಹರೆಯದ ಈ ಯುವಕನನ್ನು ವೈದ್ಯರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ಈತನ ಕತ್ತರಿಸಲ್ಪಟ್ಟ ಶಿಶ್ನ ಮಾತ್ರ ನಾಪತ್ತೆಯಾಗಿರುವುದು ದೊಡ್ಡ ಚಿಂತೆಗೀಡು ಮಾಡಿದೆ!

ಆದರೆ ತಾನು ಪ್ರಿಯತಮೆಗಾಗಿ ಶಿಶ್ನ ಕತ್ತರಿಸಿ ಬಿಸಾಕಿರುವ ಘಟನೆಗೆ ಬಗ್ಗೆ ತುಟಿ ಬಿಚ್ಚಿಲ್ಲ ಈ ಹುಚ್ಚು ಪ್ರಿಯತಮ. ಆದರೆ ಸಮೀಪವರ್ತಿಗಳು ಆತನ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ