ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 12ವರ್ಷದ ನಂತ್ರ ಬಂಡುಕೋರರಿಂದ ಸೈನಿಕ ಬಂಧಮುಕ್ತ (Colombian rebels | soldier | FARC | Sgt. Pablo Emilio | freed)
Bookmark and Share Feedback Print
 
ಸುಮಾರು 12ವರ್ಷಗಳ ಕಾಲ ಬಂಡುಕೋರರ ಬಳಿ ಒತ್ತೆಯಾಳಾಗಿದ್ದ ಕೊಲಂಬಿಯನ್ ಸೈನಿಕನೊಬ್ಬನನ್ನು ಕೊನೆಗೂ ಮಂಗಳವಾರ ಬಿಡುಗಡೆಗೊಳಿಸಿದ್ದು, ಇದೀಗ ಬಂಧಮುಕ್ತ ಸೈನಿಕ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.

ದಶಕಗಳ ನಂತರ ಬಿಡುಗಡೆಗೊಂಡ ಮಗನನ್ನು ತಂದೆ ದಾರಿಯ ಮಧ್ಯದಲ್ಲೇ ಬಿಗಿದಪ್ಪಿ ಆನಂದಬಾಷ್ಪ ಸುರಿಸಿ, ಆತ್ಮೀಯವಾಗಿ ಬರಮಾಡಿಕೊಂಡರು. ಸುದೀರ್ಘ ಕಾಲ ಬಂಡುಕೋರರ ಬಳಿ ಒತ್ತೆಯಾಳಾಗಿದ್ದ ಸಾರ್ಜೆಂಟ್ ಪಾಬ್ಲೋ ಎಮಿಲಿಯೋ ಮೋನ್‌ಕಾಯೋ ಬಿಡುಗಡೆಗೊಂಡ ಸೈನಿಕನಾಗಿದ್ದಾರೆ.

ಕೊಲಂಬಿಯಾದ ರೆವಲ್ಯೂಷನರಿ ಆರ್ಮ್‌ಡ್ ಫೋರ್ಸ್‌ನ ಸೈನಿಕನಾಗಿದ್ದ ಪಾಬ್ಲೋ ಅವರನ್ನು 1997ರ ಡಿಸೆಂಬರ್ 21ರಂದು ದಾಳಿ ನಡೆಸಿದ ಬಂಡುಕೋರರು ಅವರನ್ನು ಅಪಹರಿಸಿ ಒತ್ತೆಯಾಳುವನ್ನಾಗಿ ಇರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪಾಬ್ಲೋ ವಯಸ್ಸು 19. ಕೊನೆಗೂ ಬಂಡುಕೋರರಿಂದ ಬಿಡುಗಡೆಗೊಂಡ ಪಾಬ್ಲೋರನ್ನು ರೆಡ್ ಕ್ರಾಸ್ ಅಧಿಕಾರಿಗಳು ಮತ್ತು ಕೊಲಂಬಿಯಾ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಕರೆ ತಂದಿದ್ದರು.

ಹೆಲಿಕಾಪ್ಟರ್‌ನಿಂದ ಕೆಳಗಿಳಿಯುತ್ತಿದ್ದಂತೆಯೇ ಮುಗುಳು ನಕ್ಕ ಪಾಬ್ಲೋ, ತನ್ನ ಕುಟುಂಬ ವರ್ಗದತ್ತ ಕೈಬೀಸಿದರು. ಈ ಸಂದರ್ಭದಲ್ಲಿ ಪಾಬ್ಲೋ ಅವರ ತಂದೆ, ತಾಯಿ ಹಾಗೂ ನಾಲ್ಕು ಸಹೋದರಿಯರು ಹಾಜರಿದ್ದು, ಆತನನ್ನು ಬಿಗಿದಪ್ಪಿ ಚುಂಬಿಸಿದರು.
ಸಂಬಂಧಿತ ಮಾಹಿತಿ ಹುಡುಕಿ