ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಅಂತ ಘೋಷಿಸಿ' (Indian-American | Pakistan | Hillary Clinton | terrorist state | Lashkar)
Bookmark and Share Feedback Print
 
ಭಾರತ ಸೇರಿದಂತೆ ವಿದೇಶಿ ನೀತಿಯ ವಿರುದ್ಧ ಭಯೋತ್ಪಾದನೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಭಾರತೀಯ ಮೂಲದ ಅಮೆರಿಕ ಸಂಘಟನೆಯೊಂದು ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಅವರನ್ನು ಒತ್ತಾಯಿಸಿದ್ದು, ಪಾಕ್‌ನ ಎಲ್ಲಾ ನ್ಯೂಕ್ಲಿಯರ್ ಶಸ್ತ್ರಾಸ್ತ್ರವನ್ನೂ ವಶಪಡಿಸಿಕೊಳ್ಳುಂತೆ ಆಗ್ರಹಿಸಿದೆ.

ಪಾಕಿಸ್ತಾನ ಇಬ್ಬಗೆಯ ನೀತಿಯನ್ನು ಅನುಸರಿಸಿ ಜಾಗತಿಕ ಮಟ್ಟದಲ್ಲಿಯೇ ವಂಚಿಸುತ್ತಿದೆ. ಪಾಕಿಸ್ತಾನ ನಟೋರಿಯಸ್ ಉಗ್ರಗಾಮಿಗಳನ್ನು ಬೆಂಬಲಿಸುವ ಮೂಲಕ ಭಯೋತ್ಪಾದನೆಯನ್ನು ಜಾಗತಿಕವಾಗಿ ಹರಡುತ್ತಿದೆ. ದುರಾದೃಷ್ಟ ಎಂಬಂತೆ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಆಧುನಿಕ ಶಸ್ತ್ರಾಸ್ತ್ರ ಮತ್ತು ಬಿಲಿಯನ್‌ಗಟ್ಟಲೇ ನಗದು ಹಣವನ್ನು ನೀಡಿರುವುದಾಗಿ ನ್ಯೂಯಾರ್ಕ್ ಮೂಲದ ಇಂಡಿಯನ್-ಅಮೆರಿಕನ್ ಇಂಟಲೆಕ್ಚುವಲ್ ಫೋರಂನ ಮುಖ್ಯಸ್ಥ ನಾರಾಯಣ್ ಕಟಾರಿಯಾ ಅವರು ಕ್ಲಿಂಟನ್ ಅವರಿಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಕೋರಿ ಅಮೆರಿಕದ ಪ್ರಮುಖ ಸಚಿವರಿಗೂ ಪತ್ರವನ್ನು ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಗೊತ್ತು ಗುರಿಯಿಲ್ಲದ ನಿಲುವಿನಿಂದಾಗಿ ಆ ದೇಶದ ಪ್ರಮುಖ ಭಾಗ ಭಯೋತ್ಪಾದಕತೆ ಮತ್ತು ಅಭದ್ರತೆಯಿಂದ ಬಳಲುತ್ತಿರುವುದನ್ನು ನಾವು ಗಮನಿಸಿದ್ದೇವೆ. ಪಾಕ್-ಅಫ್ಘಾನ್ ಗಡಿಯಲ್ಲಿ ಅಮೆರಿಕದ ಮಿಲಿಟರಿ ಪಡೆ ಉಗ್ರರನ್ನು ಬಗ್ಗುಬಡಿಯಲು ಹೋರಾಡುತ್ತಿದ್ದಾರೆ. ಆದರೂ ಕೂಡ ಉಗ್ರರ ಅಟ್ಟಹಾಸ ನಿಂತಿಲ್ಲ, ಇದಕ್ಕೆಲ್ಲಾ ಪಾಕಿಸ್ತಾನವೇ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅಲ್ಲದೇ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯಾದ ಲಷ್ಕರ್ ಇ ತೊಯ್ಬಾ ಚೀನಾದಿಂದ ಸುಮಾರು 50ಪ್ಯಾರಾಗ್ಲೈಡಿಂಗ್ ಅನ್ನು ಖರೀದಿಸಿರುವ ಬಗ್ಗೆ ಭಾರತೀಯ ಅಧಿಕಾರಿಗಳು ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದಿದೆ. ಇದನ್ನು ಲಷ್ಕರ್ ಭಾರತದ ವಿರುದ್ಧ ಆತ್ಮಹತ್ಯಾ ಹಾಳಿ ನಡೆಸಲು ಬಳಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಹಿಂದೆ ಪಾಕಿಸ್ತಾನದ ಕೈವಾಡ ಇರುವುದಾಗಿ ಇಂಟಲೆಕ್ಚುವಲ್ ಫೋರಂ ಆಪಾದಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ