ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾದಲ್ಲಿ ಮತ್ತೆ ಅವಳಿ ಬಾಂಬ್ ಸ್ಫೋಟಕ್ಕೆ 9ಬಲಿ (Russia | suicide blasts | Dagestan | Bomb Blast | Moscow)
Bookmark and Share Feedback Print
 
ರಷ್ಯಾದಲ್ಲಿ ಅವಳಿ ಸ್ಫೋಟ ಸಂಭವಿಸಿದ ಘಟನೆಯ ಬೆನ್ನಲ್ಲೇ ಬುಧವಾರ ಮತ್ತೆ ಇಲ್ಲಿನ ಡಾಗೆಸ್ತಾನ್‌ನ ಉತ್ತರದ ಕಾಕುಸಸ್ ಪ್ರದೇಶದಲ್ಲಿ ಎರಡು ಬಾಂಬ್ ಸ್ಫೋಟಿಸಿದ ಪರಿಣಾಮ ಸ್ಥಳೀಯ ಪೊಲೀಸ್ ಅಧಿಕಾರಿ ಸೇರಿದಂತೆ ಒಂಬತ್ತು ಮಂದಿ ಬಲಿಯಾಗಿದ್ದಾರೆ ಎಂದು ಇಂಟರ್‌ಫಾಕ್ಸ್ ನ್ಯೂಸ್ ಏಜೆನ್ಸಿ ತಿಳಿಸಿದೆ.

ವ್ಯಕ್ತಿಯೊಬ್ಬ ಪೊಲೀಸ್ ಸಮವಸ್ತ್ರದಲ್ಲಿ ಆಗಮಿಸಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ದಾಳಿ ನಡೆಸಿದ ಪರಿಣಾಮ ಸ್ಥಳೀಯ ಪೊಲೀಸ್ ಅಧಿಕಾರಿ ವಿಟಾಲೆ ವೆಡೆರ್ನಿಕೋವ್ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಾಲೆಯ ಸಮೀಪದ ಕಾರ್ ಪಾರ್ಕ್ ಸಮೀಪ ಡ್ರೈವರ್‌ವೊಬ್ಬ ಸ್ಫೋಟಕ ತುಂಬಿದ ಪ್ಯಾಕ್ ಅನ್ನು ಎಸೆದ ಪರಿಣಾಮ ಮೊದಲ ಸ್ಫೋಟ ಸಂಭವಿಸಿತ್ತು. ಬಳಿಕ ಸುಮಾರು ಅರ್ಧ ಗಂಟೆಯ ನಂತರ ಪೊಲೀಸ್ ಸಮವಸ್ತ್ರದಲ್ಲಿ ಬಂದು ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದ.

ಸ್ಪೋಟದಿಂದಾಗಿ ಶಾಲೆಗೆ ಯಾವುದೇ ಹಾನಿಯಾಗಿಲ್ಲ, ಕಾರ್ ಪಾರ್ಕಿನಲ್ಲಿದ್ದ ಮೂರು ಕಾರುಗಳು ಭಸ್ಮವಾಗಿದ್ದು, ಒಟ್ಟು ಒಂಬತ್ತು ಮಂದಿ ಬಲಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಸೋಮವಾರವಷ್ಟೇ ರಷ್ಯಾದ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಅವಳಿ ಬಾಂಬ್ ಸ್ಫೋಟಿಸಿದ ಪರಿಣಾಮ 39ಜನರು ಸಾವನ್ನಪ್ಪಿದ್ದರು. ಘಟನೆ ಬಳಿಕ ಭಯೋತ್ಪಾದನೆ ವಿರುದ್ಧ ರಷ್ಯಾ ಪ್ರಧಾನಿ ಪುಟಿನ್ ಕಿಡಿಕಾರಿದ್ದು, ಉಗ್ರರನ್ನು ಬಗ್ಗು ಬಡಿಯುವುದಾಗಿ ಹೇಳಿದ್ದರು. ಇದೀಗ ಮತ್ತೆ ಸ್ಫೋಟ ಸಂಭವಿಸುವ ಮೂಲಕ ರಷ್ಯಾ ಜನರು ಆತಂಕದಲ್ಲಿ ಇರುವಂತೆ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ