ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಂದೆಯ ಹಂತಕ ಪಾಕ್‌ನ್ನು ಆಳುತ್ತಿದ್ದಾರೆ: ಫಾತಿಮಾ ಭುಟ್ಟೋ (Fatima Bhutto | Zulfikar Ali Bhutto | Asif Ali Zardari | Pakistan)
Bookmark and Share Feedback Print
 
ತನ್ನ ತಂದೆ ಮಿರ್ ಮುರ್ತಾಜ್ ಭುಟ್ಟೋರನ್ನು ಕೊಂದ ಹಂತಕರೇ ಇಂದು ಪಾಕಿಸ್ತಾನವನ್ನು ಆಳುತ್ತಿದ್ದಾರೆ ಎಂದು ಪಾಕ್‌ನ ಮಾಜಿ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೋ ಮೊಮ್ಮಗಳು, ಗಂಭೀರವಾಗಿ ಹಾಲಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯನ್ನು ಉದ್ದೇಶಿಸಿ ಆರೋಪಿಸಿದ್ದರು.

ಮಿರ್ ಮುರ್ತಾಜ್ ಭುಟ್ಟೋ ಅವರನ್ನು ಕೊಂದ ಪಾತಕಿಯೇ ಇಂದು ಪಾಕಿಸ್ತಾನದ ಆಡಳಿತ ನಡೆಸುತ್ತಿರುವುದಾಗಿ ಪುತ್ರಿ ಫಾತಿಮಾ ತಮ್ಮ 'ಸಾಂಗ್ಸ್ ಆಫ್ ಬ್ಲಡ್ಸ್ ಅಂಡ್ ಸೋರ್ಡ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಸುಮಾರು 14ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕೊಂದ ಘಟನೆ ಬಗ್ಗೆ ಈ ಸಂದರ್ಭದಲ್ಲಿ ವಿವರಿಸಿದರು.

ತಮ್ಮ ಭಾಷಣದುದ್ದಕ್ಕೂ ಜರ್ದಾರಿ ಅವರ ಹೆಸರನ್ನು ಉಲ್ಲಂಘಿಸದೆ ಆರೋಪಿಸಿದ ಫಾತಿಮಾ, ತಂದೆಯ ಹಂತಕರು ಪ್ರಸ್ತುತ ದೇಶವನ್ನಾಳುತ್ತಿರುವುದು ದುರ್ದೈವದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಅಂದು ಉದ್ದೇಶಪೂರ್ವಕವಾಗಿ ಬೀದಿದೀಪಗಳನ್ನು ಆರಿಸಲಾಗಿತ್ತು. ಅಲ್ಲದೇ ಭಾರೀ ಗಾತ್ರದ ವಾಹನಗಳ ಸಂಚರವನ್ನೂ ನಿಷೇಧಿಸಿ, ಪೊಲೀಸರು ತನ್ನ ತಂದೆಯ ಹತ್ಯೆಗಾಗಿ ಕಾಯುತ್ತಿದ್ದರು ಎಂದು ಫಾತಿಮಾ ತಿಳಿಸಿರುವುದಾಗಿ ರಾಜಕೀಯ ವಕ್ತಾರರೊಬ್ಬರು ಹೇಳಿದ್ದಾರೆ.

ತಮ್ಮ ತಂದೆಯನ್ನು ಕೊಂದಿದ್ದು ಯಾರೆಂಬುದಕ್ಕೆ ಸಾಕ್ಷಿ ಕೂಡ ಸಿಕ್ಕಿತ್ತು. ಮುರ್ತಾಜ್ ಭುಟ್ಟೋ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿದವರನ್ನು ಬಂಧಮುಕ್ತಗೊಳಿಸಿ ನಂತರ ಅವರಿಗೆ ರಾಷ್ಟ್ರೀಯ ಪದಕವನ್ನು ಕೊಟ್ಟು ಪುರಸ್ಕರಿಲಾಗಿತ್ತು ಎಂದು ಕಿಡಿಕಾರಿದರು.

ಅದರಲ್ಲಿ ಕೆಲವರು ವಿದೇಶಕ್ಕೆ ತೆರಳಿರುವುದಾಗಿಯೂ ಫಾತಿಮಾ ತಿಳಿಸಿದ್ದಾರೆಂದು ದಿ ನೇಷನ್ ಪತ್ರಿಕೆ ವರದಿ ವಿವರಿಸಿದೆ. ಮುರ್ತಾಜ್ ಅವರ ಹತ್ಯೆಯ ಹಿಂದೆ ಬೇನಜಿರ್ ಅಥವಾ ಅಸಿಫ್ ಅಲಿ ಜರ್ದಾರಿ ಕೈವಾಡ ಇರುವುದಾಗಿ ಫಾತಿಮಾ ಮತ್ತು ಆಕೆಯ ಚಿಕ್ಕಮ್ಮ ಗಿನ್ವಾ ಬುಟ್ಟೋ ಬಲವಾಗಿ ಆಪಾದಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ