ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೆ ಅಡಕತ್ತರಿಯಲ್ಲಿ ಜರ್ದಾರಿ; ಭ್ರಷ್ಟಾಚಾರ ಕೇಸ್ ಮರುತನಿಖೆ (Pakistan | graft cases | Supreme Court | Asif Ali Zardari | Swiss banks,)
Bookmark and Share Feedback Print
 
ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಮರುತನಿಖೆ ಮಾಡಬೇಕೆಂದು ಪಾಕಿಸ್ತಾನ ಸರ್ಕಾರ ಸ್ವಿಟ್ಜರ್‌ಲ್ಯಾಂಡ್‌ಗೆ ಮನವಿ ಮಾಡಿಕೊಳ್ಳುವ ಮೂಲಕ ಜರ್ದಾರಿ ಮತ್ತೆ ಕಾನೂನಿನ ಕುಣಿಕೆಗೆ ಸಿಲುಕಿಕೊಂಡಂತಾಗಿದೆ.

ಜರ್ದಾರಿ ಸ್ವಿಸ್ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಇಟ್ಟಿರುವ ಸುಮಾರು 60ಮಿಲಿಯನ್ ಹಣದ ಬಗ್ಗೆ ಮರು ತನಿಖೆ ಆರಂಭಿಸುವಂತೆ ಸ್ವಿಸ್ ಸರ್ಕಾರವನ್ನು ಕೋರಲಾಗಿದೆ ಎಂದು ಪಾಕ್‌ನ ಭ್ರಷ್ಟಾಚಾರ ನಿಗ್ರಹ ದಳ ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಅಧ್ಯಕ್ಷ ಜರ್ದಾರಿ ಅವರ ಭ್ರಷ್ಟಾಚಾರ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಸ್ವಿಸ್ ಅಟಾರ್ನಿ ಜನರಲ್ ಮತ್ತು ಇತರ ಅಧಿಕಾರಿಗಳಿಗೂ ಕೂಡ ಪತ್ರ ಬರೆಯಲಾಗಿದೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರನ್ನೊಳಗೊಂಡ ಏಳು ಮಂದಿ ನ್ಯಾಯಪೀಠಕ್ಕೆ ವಕೀಲ ಅಬಿದ್ ಜುಬೈರಿ ಮಾಹಿತಿ ನೀಡಿದ್ದಾರೆ.

ಜರ್ದಾರಿ ವಿರುದ್ಧದ 152ಪ್ರಕರಣಗಳನ್ನು ಮರು ತನಿಖೆ ನಡೆಸುವ ಬಗ್ಗೆ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಮುಂದಿನ ಕ್ರಮ ಕೈಗೊಳ್ಳಲಿದೆ. ಅಲ್ಲದೇ ಪ್ರಕರಣದ ಮರು ತನಿಖೆಗೆ ಸ್ವಿಸ್ ಸರ್ಕಾರ ನೆರವು ನೀಡುವಂತೆಯೂ ವಿದೇಶಾಂಗ ಸಚಿವಾಲಯ ಮನವಿ ಮಾಡಿಕೊಂಡಿರುವುದಾಗಿ ಜುಬೈರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ