ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಗತ್ತಿನಲ್ಲೇ ಅತೀ ಹೆಚ್ಚು ಅಫೀಮು ಬೆಳೆಯುವ ದೇಶ ಅಫ್ಘಾನ್! (Cannabis | Afghanistan | hashish | UN | Vienna | Drugs and Crime)
Bookmark and Share Feedback Print
 
ಅಫ್ಘಾನಿಸ್ತಾನ ಜಗತ್ತಿನಲ್ಲಿ ಅತೀ ಹೆಚ್ಚು ಅಫೀಮು ಹಾಗೂ ಗಾಂಜಾ ಬೆಳೆಸುವ ದೇಶವಾಗಿದ್ದು, ಹೆಚ್ಚು ಹಾಶೀಶ್‌ನ್ನು ಬೆಳೆಯುವ ಮೊರಾಕ್ಕೋವನ್ನು ಕೂಡ ಇದು ಹಿಂದಿಕ್ಕಿದೆ ಎಂದು ವಿಶ್ವಸಂಸ್ಥೆಯ ಡ್ರಗ್ಸ್ ಎಂಡ್ ಕ್ರೈಮ್ ಅಧಿಕಾರಿಗಳು ತಿಳಿಸಿದ್ದಾರೆ.

ಇತರ ದೇಶಗಳು ಕೂಡ ಗಾಂಜಾ ಪ್ರಮುಖವಾಗಿ ಬೆಳೆತ್ತಿದ್ದರೂ ಕೂಡ, ಅಫ್ಘಾನಿಸ್ತಾನ ಗಾಂಜಾವನ್ನು ಅತಿ ಹೆಚ್ಚು ಬೆಳೆಯುವ ಮೂಲಕ ಜಗತ್ತಿನ ಅತೀ ದೊಡ್ಡ ಹಾಶೀಶ್ ಉತ್ಪಾದನೆಯ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ ಎಂದು ಯುಎನ್‌ಓಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಆನ್‌ಟೋನಿಯೋ ಮಾರಿಯಾ ಕೋಸ್ಟಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಅಫ್ಘಾನಿಸ್ತಾನದ ರೈತರು ಒಂದು ಹೆಕ್ಟೇರ್‌ನಲ್ಲಿ 145ಕಿಲೋ ಗ್ರಾಂನಷ್ಟು ಹಾಶೀಶ್ ಅನ್ನು ಬೆಳೆಯುತ್ತಾರೆ ಎಂದು ವಿಶ್ವಸಂಸ್ಥೆ ಸಮೀಕ್ಷೆ ತಿಳಿಸಿದೆ. ಅಲ್ಲದೇ ಅಷ್ಟೇ ಪ್ರಮಾಣದಲ್ಲಿ ಗಾಂಜಾವನ್ನು ಸಹ ಬೆಳೆಯುತ್ತದೆ. ಒಟ್ಟಾರೆ ಪ್ರತಿವರ್ಷ 1500ರಿಂದ 3,500ಟನ್‌ನಷ್ಟು ಬೆಳೆ ತೆಗೆಯುತ್ತದೆ.

ಪ್ರತಿವರ್ಷ ಅಫ್ಘಾನಿಸ್ತಾನದಲ್ಲಿ ಹತ್ತು ಸಾವಿರದಿಂದ 24ಸಾವಿರ ಹೆಕ್ಟೇರ್ಸ್‌ನಲ್ಲಿ ಗಾಂಜಾವನ್ನು ಬೆಳೆಯುವ ಮೂಲಕ 39ರಿಂದ 94ಮಿಲಿಯನ್ ಡಾಲರ್‌ನಷ್ಟು ಆದಾಯ ಗಳಿಸುತ್ತದೆ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ