ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹುಟ್ಟು ಹಬ್ಬಕ್ಕೆ ಹೋದ ಅತಿಥಿಗೆ ಚೂರಿ ಇರಿದು ಹತ್ಯೆ! (Sikh man stabbed | Canada | Toronto | birthday party)
Bookmark and Share Feedback Print
 
ಆಡಂಬರದ ಹುಟ್ಟು ಹಬ್ಬದ ಸಮಾರಂಭದಲ್ಲಿ ನೆರೆಹೊರೆಯರ ನಡುವೆ ಘರ್ಷಣೆ ಏರ್ಪಟ್ಟ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ 21ರ ಹರೆಯದ ಸಿಖ್ ಯುವಕನೊಬ್ಬನನ್ನು ಚೂರಿಯಿಂದ ಇರಿದು ಹತ್ಯೆಗೈದ ಘಟನೆ ಕೆನಡಾದಲ್ಲಿ ನಡೆದಿದೆ.

ಭಾನುವಾರ ಇಲ್ಲಿ ಅದ್ದೂರಿಯ ಹುಟ್ಟುಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಬೂಟಾ ಸಿಂಗ್ ಸಂಗಾ ಎಂಬಾತನಿಗೆ ಚೂರಿಯಿಂದ ಇರಿದ ಪರಿಣಾಮ ಆತ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಗುವಿನ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬೂಟಾನನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಆದರೆ ಈ ಸಂದರ್ಭದಲ್ಲಿಯೇ ಗಲಾಟೆ ಆರಂಭವಾಗಿತ್ತು. ಮಾತಿನ ಚಕಮಕಿಯ ಜಗಳ ಹಿಂಸಾಚಾರಕ್ಕೆ ತಿರುಗಿದಾಗ ಸಿಂಗ್‌ಗೆ ಚೂರಿಯಿಂದ ಇರಿಯಲಾಗಿತ್ತು. ಹುಟ್ಟು ಹಬ್ಬದ ಸಂಭ್ರಮದಂದು ಎರಡು ಕುಟುಂಬಗಳ ನಡುವೆ ಭಾರೀ ಕಾಳಗವೇ ನಡೆದಿತ್ತು ಎಂದು ವಾಂಕೋವರ್ ಸನ್ ಪತ್ರಿಕೆ ವರದಿ ಹೇಳಿದೆ.

ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಆಗ ಸಿಂಗ್ ಚೂರಿ ಇರಿತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದನ್ನು ಪತ್ತೆ ಹಚ್ಚಿ, ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 32ರ ಹರೆಯದ ಅಡ್ರಿನ್ ಸ್ಕಾರಾ ಎಂಬಾತನನ್ನು ಬಂಧಿಸಿದ್ದು, ಆತನ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ. ಆಡ್ರಿನನ್ನು ಪೊಲೀಸರು ಮಂಗಳವಾರ ಸುರ್ರೆ ಪ್ರೊವಿನ್ಶಿಯಲ್ ಕೋರ್ಟ್‌ಗೆ ಹಾಜರುಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ