ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫತ್ವಾ ಹೆಸರಿನಲ್ಲಿ ಮುಗ್ಧರ ಹತ್ಯೆ ತಪ್ಪು: ಮುಸ್ಲಿಮ್ ಪಂಡಿತರು (Osama bin Laden | Jihad fatwa | Mardin fatwa | Ibn Taymiyya)
Bookmark and Share Feedback Print
 
ಅಲ್ ಖಾಯಿದಾದ ವರಿಷ್ಠ ಒಸಾಮಾ ಬಿನ್ ಲಾಡೆನ್ 'ಫತ್ವಾ' ಬಗ್ಗೆ ಅಪಾರ್ಥ ಮಾಡಿಕೊಂಡಿದ್ದು, ಅದನ್ನು ಮುಗ್ದ ಜನರ ಹತ್ಯೆ ಮಾಡುತ್ತಿರುವುದಕ್ಕೂ ಉಪಯೋಗಿಸುತ್ತಿರುವ ಬಗ್ಗೆ ಮುಸ್ಲಿಮ್ ಪಂಡಿತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆ ನಿಟ್ಟಿನಲ್ಲಿ ಮಧ್ಯಯುಗದ ಫತ್ವಾದ ಕುರಿತು ಮರುವ್ಯಾಖ್ಯಾನ ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮುಗ್ಧ ಜನರ ಹತ್ಯೆ ಮಾಡುವುದನ್ನೂ ಕೂಡ ಸಮರ್ಥಿಕೊಂಡು ಫತ್ವಾ ಮೂಲಕ ಕರೆ ನೀಡುತ್ತಿರುವುದು ಜಾಗತಿಕದ ನಂಬಿಕೆಗೆ ಮತ್ತು ನಾಗರಿಕ ಹಕ್ಕುಗಳಿಗೆ ವಿರುದ್ಧವಾದದ್ದು ಎಂದು ವಿಶ್ಲೇಷಿಸಿದೆ.

ದುಬೈನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಮುಸ್ಲಿಮ್ ಪಂಡಿತರು, 14ನೇ ಶತಮಾನದ ಪಂಡಿತ ಇಬ್ನ್ ತ್ಯಾಮಿಯ್ಯ ಫತ್ವಾದ ಜನಕರಾಗಿದ್ದಾರೆ. ಮಧ್ಯಯುಗದ ಸಂದರ್ಭದಲ್ಲಿ ಟರ್ಕಿಯ ಮಾರ್ಡಿನ್‌ನಲ್ಲಿ ಉಗ್ರರ ಹಿಂಸಾಚಾರದ ವಿರುದ್ಧ ಅವರು ಫತ್ವಾ ಹೊರಡಿಸಿದ್ದರು.

ಫತ್ವಾದ ಕುರಿತು ಅಪಾರ್ಥ ಮಾಡಿಕೊಂಡಿದ್ದು, ಮುಸ್ಲಿಮ್ ಹಾಗೂ ಮುಸ್ಲಿಮೇತರರನ್ನು ಹತ್ಯೆಗೈಯಲು ಫತ್ವಾ ಹೊರಡಿಸುತ್ತಿರುವುದು ಸಮಂಜಸವಾದ ಕ್ರಮವಲ್ಲ ಎಂದು ಪಂಡಿತರು ತಿಳಿಸಿದ್ದಾರೆ. ಹಾಗಾಗಿ ಹಳೇಯ ಅಂಶಗಳಿಂದ ಕೂಡಿದ ಫತ್ವಾವನ್ನು ಪ್ರಸ್ತುತ ಕಾಲಘಟ್ಟದಲ್ಲಿಯೂ ಕೂಡ ಜಿಹಾದ್ ಹೆಸರಿನಲ್ಲಿ ಫತ್ವಾ ಹೊರಡುತ್ತಿರುವ ಕುರಿತು ವಿರೋಧ ವ್ಯಕ್ತಪಡಿಸಿ, ಈ ಬಗ್ಗೆ ಮರು ವ್ಯಾಖ್ಯಾನ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಆದರೆ ಒಸಾಮಾ ಬಿನ್ ಲಾಡೆನ್ ಇಬ್ನ್ ತ್ಯಾಮಿಯ್ಯ ಅವರ 'ಮಾರ್ಡಿನ್ ಫತ್ವಾ'ದ ಅಂಶವನ್ನೇ ಉಲ್ಲೇಖಿಸಿ, ಸೌದಿ ಅರೇಬಿಯಾದ ಆಡಳಿತ ಮತ್ತು ಅಮೆರಿಕದ ವಿರುದ್ಧ ಜಿಹಾದ್ ನಡೆಸಲು ಕರೆ ಕೊಟ್ಟಿರುವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫತ್ವಾ ಎಂಬುದು ಸಾಂಪ್ರದಾಯಿಕ ಉಲ್ಲೇಖವಾಗಿದೆ. ಆದರೆ ಮುಸ್ಲಿಮೇತರರ ವಿರುದ್ಧ ಹೋರಾಟ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ನಿಜಕ್ಕೂ ಮುಸ್ಲಿಮ್ ಪ್ರದೇಶದ ಮೇಲೆ ಮಧ್ಯಯುಗದಲ್ಲಿ ಮುಂಗೋಲಿಯನ್‌ರ ದಾಳಿಯನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಹೊರಡಿಸುತ್ತಿದ್ದಂತಹ ಆದೇಶವಾಗಿತ್ತು ಎಂದು ಮುಸ್ಲಿಮ್ ಪಂಡಿತರು ವಿಶ್ಲೇಷಿಸಿದ್ದಾರೆ.

ಜಾಗತಿಕವಾಗಿ ಮುಸ್ಲಿಮ್ ಮತ್ತು ಮುಸ್ಲಿಮೇತರರು ಎಂದು ಇಬ್ಭಾಗ ಮಾಡುವಂತಹ ಈ ಹಳೇಯ ದೃಷ್ಟಿಕೋನದ ಬಗ್ಗೆ ಇಸ್ಲಾಂ ನಿಜಕ್ಕೂ ಮರುವ್ಯಾಖ್ಯಾನ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಕೂಡ ಹೇಳಿದ್ದಾರೆ.

ನಾಗರಿಕ ಸಮಾಜದಲ್ಲಿ ಧಾರ್ಮಿಕತೆ ರಕ್ಷಣೆ, ಜನಾಂಗ ಮತ್ತು ರಾಷ್ಟ್ರೀಯ ಹಕ್ಕುಗಳು ತಾಳ್ಮೆಯಿಂದ ಹೊರಹೊಮ್ಮುವ ಮೂಲಕ ಎಲ್ಲಾ ಧರ್ಮಗಳ ನಡುವೆ ಶಾಂತಿ, ಸೌಹಾರ್ದತೆ ನೆಲೆಸಿ, ವೈಮನಸ್ಸಿನಿಂದ ದೂರಾಗಬೇಕು ಎಂದು ವಿವರಿಸಿದ್ದಾರೆ.

ಗತಕಾಲದ ಮುಸ್ಲಿಮ್ ಆಡಳಿತಗಾರರ ದೃಷ್ಟಿಕೋನ ಈ ಜಾಗತೀಕರಣದ ಸಂದರ್ಭದಲ್ಲಿ ಮಾದರಿಯಾಗಲು ಸಾಧ್ಯವಿಲ್ಲ, ಅದು ಈಗ ಅಪ್ರಸ್ತುತವಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಜಾತ್ಯತೀತತೆ ಧಾರ್ಮಿಕ ವಿರೋಧಿ ಅಲ್ಲ ಎಂಬುದನ್ನು ಮುಸ್ಲಿಮರು ಮನಗಾಣಬೇಕು ಎಂದರು. ಅಮೆರಿಕ ಕೂಡ ಚರ್ಚ್ ಮತ್ತು ರಾಷ್ಟ್ರಗಳ ನಡುವಿನ ಪ್ರತ್ಯೇಕತೆಯ ಕಿರಿಕ್ಕುಗಳ ಸಮಸ್ಯೆಯನ್ನು ನಿವಾರಿಸಿದೆ. ಆದರೆ ಕೆಲವು ಫ್ರೆಂಚ್ ರೆವಲ್ಯೂಷನ್ ಜಾತ್ಯತೀತ ಹೆಸರಿನಲ್ಲಿ ಧಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.

ಹಾಗಾಗಿ ಮಧ್ಯಕಾಲದ ಅದೇ ಹಳೇ ಅಂಶಗಳನ್ನಿಟ್ಟುಕೊಂಡು ಸಾರ್ವಜನಿಕವಾಗಿ ಫತ್ವಾವನ್ನು ಹೊರಡಿಸುವ ವಿಚಾರದ ಕುರಿತಂತೆ ಮುಸ್ಲಿಮ್ ಪಂಡಿತರು ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಶೀಲನೆ ನಡೆಸಿ, ಫತ್ವಾದ ಕುರಿತು ಮರುವ್ಯಾಖ್ಯಾನ ಮಾಡಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಈ ಸಭೆಯಲ್ಲಿ ಸೌದಿ ಅರೇಬಿಯಾ, ಟರ್ಕಿ, ಭಾರ, ಕುವೈಟ್, ಇರಾನ್, ಮೊರಾಕ್ಕೊ ಹಾಗೂ ಇಂಡೋನೇಷ್ಯಾ ಸೇರಿದಂತೆ ಸುಮಾರು 15ದೇಶಗಳ ಮುಸ್ಲಿಮ್ ಪಂಡಿತರು ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ