ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ದಾರಿ ಪ್ರಕರಣದ ಮರುತನಿಖೆಗೆ ಪಾಕ್ ಕೇಳಿಲ್ಲ: ಸ್ವಿಸ್ (Pakistan | Swiss | Asif Ali Zardari | Benazir Bhutto | Lahore)
Bookmark and Share Feedback Print
 
ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಸ್ವಿಸ್ ಅಧಿಕಾರಿಗಳಲ್ಲಿ ಪಾಕಿಸ್ತಾನದ ಅಧಿಕಾರಿಗಳು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಜಿನೇವಾದ ಪಬ್ಲಿಕ್ ಪ್ರಾಸಿಕ್ಯೂಟರ್ ಬುಧವಾರ ಸ್ಪಷ್ಟನೆ ನೀಡಿದ್ದಾರೆ.

ಜರ್ದಾರಿ ಎಲ್ಲಾ ಕೇಸುಗಳಿಂದ ವಿಮುಕ್ತಿ ಹೊಂದಿದ್ದು, ಅವರು ಪಾಕಿಸ್ತಾನದ ಅಧ್ಯಕ್ಷರಾಗಿ ಮುಂದುವರಿಯುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಾಸಿಕ್ಯೂಟರ್ ಜನರಲ್ ಡಾನಿಯೆಲ್ ಜಾಪ್ಪೆಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದಿಂದ ನಾವು ಈವರೆಗೂ ಯಾವುದೇ ಮನವಿಯನ್ನು ಸ್ವೀಕರಿಸಿಲ್ಲ ಎಂದು ಜಾಪ್ಪೆಲ್ಲಿ ಹೇಳಿದ್ದಾರೆ. ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಕುರಿತು ಮರು ತನಿಖೆ ಆರಂಭಿಸಬೇಕೆಂದು ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಸ್ವಿಸ್‌ಗೆ ಮನವಿ ಮಾಡಿಕೊಂಡಿದೆ ಎಂಬ ವರದಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಜರ್ದಾರಿ ಮತ್ತು ಉಗ್ರರಿಂದ ಹತ್ಯೆಗೊಳಗಾದ ಬೇನಜಿರ್ ಭುಟ್ಟೋ ಅವರು ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ 2003ರಲ್ಲಿ ಜಿನೇವಾ ನ್ಯಾಯಾಲಯದಲ್ಲಿ ದೋಷಿತರಾಗಿದ್ದರು. ಆದರೆ ಪಾಕಿಸ್ತಾನ ಸರ್ಕಾರದ ಮನವಿ ಮೇರೆಗೆ 2008ರ ಆಗೋಸ್ಟ್ ತಿಂಗಳಿನಲ್ಲಿ ಎಲ್ಲಾ ಪ್ರಕರಣವನ್ನು ರದ್ದು ಮಾಡಲಾಗಿತ್ತು ಎಂದು ತಿಳಿಸಿದರು.

ಅಲ್ಲದೇ 1999ರಲ್ಲಿ ಜರ್ದಾರಿ ಮತ್ತು ಬುಟ್ಟೋಗೆ ಲಾಹೋರ್ ಹೈಕೋರ್ಟ್ ಶಿಕ್ಷೆ ವಿಧಿಸಿತ್ತು. ಆದರೆ 2001ರಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿತ್ತು. ಇದರಿಂದಲೂ ಅವರಿಗೆ ಮುಕ್ತಿ ದೊರಕಿತ್ತು ಎಂದು ಜಾಪ್ಪೆಲ್ಲಿ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ