ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ ರೈಸ್ ಸೇರಿ 4ಮಂದಿಗೆ ಮೊದ್ಲೆ ತಿಳಿದಿತ್ತು: ಜರ್ದಾರಿ (Condoleezza Rice | Benazir | Asif Zardari | Pakistan | Hamid Karzai,)
Bookmark and Share Feedback Print
 
PTI
ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಭುಟ್ಟೋ ಹತ್ಯೆಗೂ ಮುನ್ನ ಆಕೆಯ ಜೀವಕ್ಕೆ ಅಪಾಯ ಇದೆ ಎಂದು ಅರಿತಿರುವ ಅಮೆರಿಕದ ಮಾಜಿ ವಿದೇಶಾಂಗ ಸಚಿವೆ ಕಾಂಡೋಲಿಸಾ ರೈಸ್ ಸೇರಿದಂತೆ ನಾಲ್ಕು ಮಂದಿಯನ್ನು ವಿಚಾರಣೆಗೊಳಪಡಿಸಬೇಕು ಎಂದು ಪತಿ ಹಾಗೂ ಪಾಕ್ ಅಧ್ಯಕ್ಷರೂ ಆಗಿರುವ ಅಸಿಫ್ ಅಲಿ ಜರ್ದಾರಿ ವಿಶ್ವಸಂಸ್ಥೆಗೆ ಮನವಿ ಮಾಡಿಕೊಂಡಿದ್ದಾರೆ.

ಭುಟ್ಟೋ ಹತ್ಯೆ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದ ನಾಲ್ಕು ಪ್ರಮುಖ ವ್ಯಕ್ತಿಗಳನ್ನು ಜರ್ದಾರಿ ಹೆಸರಿಸಿದ್ದಾರೆ. ಅದರಲ್ಲಿ ಅಮೆರಿಕದ ಮಾಜಿ ವಿದೇಶಾಂಗ ಸಚಿವೆ ಕಾಂಡೋಲಿಸಾ ರೈಸ್, ಅಫ್ಘಾನಿಸ್ತಾನ್ ಅಧ್ಯಕ್ಷ ಹಮೀದ್ ಕರ್ಜೈಯ್, ಸೌದಿ ಅರೇಬಿಯಾದ ಗುಪ್ತಚರ ಇಲಾಖೆಯ ವರಿಷ್ಠ ಪ್ರಿನ್ಸ್ ಮುಕ್ರಿನ್ ಬಿನ್ ಅಬ್ದುಲ್ ಅಜೀಜ್ ಹಾಗೂ ಯುಎಇ ಇಂಟೆಲಿಜೆನ್ಸ್ ವರಿಷ್ಠರು ಸೇರಿದ್ದಾರೆ. ಬೆನಜೀರ್ ಭುಟ್ಟೋ ಅವರ ಹತ್ಯೆಯಾಗುತ್ತದೆ ಎಂಬ ರಹಸ್ಯ ಮುಂಚಿತವಾಗಿಯೇ ಇವರಿಗೆ ಹೇಗೆ ತಿಳಿದಿತ್ತು ಎಂದು ಜರ್ದಾರಿ ಪ್ರಶ್ನಿಸಿರುವುದಾಗಿ ನ್ಯೂಸ್ ಡೈಲಿ ವರದಿ ಗುರುವಾರ ತಿಳಿಸಿದೆ.

2007ರಲ್ಲಿ ಬೆನಜೀರ್ ಭುಟ್ಟೋ ಅವರ ಹತ್ಯಾ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸುವ ಮುನ್ನ ಈ ನಾಲ್ಕು ಮಂದಿ ಪರೋಕ್ಷ ಸಾಕ್ಷಿಗಳ ವಿಚಾರಣೆ ನಡೆಸಲಾಗುವುದು ಎಂದು ವಿಶ್ವಸಂಸ್ಥೆ ಆಯೋಗ ತಿಳಿಸಿರುವುದಾಗಿ ಮೂಲವೊಂದು ಹೇಳಿದೆ ಎಂದು ವರದಿ ವಿವರಿಸಿದೆ.

ಸ್ವಯಂಗಡಿಪಾರುಗೊಂಡಿದ್ದ ಬೆನಜೀರ್ ಭುಟ್ಟೋ ಅವರು ಪಾಕಿಸ್ತಾನಕ್ಕೆ ಮತ್ತೆ ಮರಳಿದಲ್ಲಿ ಅವರ ಮೇಲೆ ದಾಳಿ ನಡೆಯುವ ಸಂಭವವಿದೆ ಎಂದು ಎರಡು ದೇಶಗಳು ಮುನ್ನೆಚ್ಚರಿಕೆ ನೀಡಿದ್ದವು. ಈ ಹೊಸ ಮಾಹಿತಿಯ ಜಾಡುಹಿಡಿದಲ್ಲಿ ಎರಡೂವರೆ ವರ್ಷಗಳ ಕಾಲದ ಭುಟ್ಟೋ ಹತ್ಯಾ ರಹಸ್ಯ ಹೊರಬೀಳಲಿದೆ ಎನ್ನಲಾಗಿದೆ.

ಪಾಕಿಸ್ತಾನ್ ಪೀಪಲ್ಸ್ ಪಕ್ಷದ ವರಿಷ್ಠೆ ಬೆನಜೀರ್ ಅವರ ಜೀವಕ್ಕೆ ಅಪಾಯ ಇದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ಎಚ್ಚರಿಕೆ ನೀಡಿತ್ತು. ಅಲ್ಲದೇ ಭುಟ್ಟೋ ಅವರ ಜೀವಕ್ಕೆ ಅಪಾಯ ಇದೆ ಎಂದು ಸೌದಿ ಪ್ರಿನ್ಸ್ ಮುಕ್ರಾನ್ ಕೂಡ ಎಚ್ಚರಿಕೆ ನೀಡಿದ್ದರು ಎಂದು ವರದಿ ಹೇಳಿದೆ.

ಆ ನಿಟ್ಟಿನಲ್ಲಿ ಈ ನಾಲ್ಕು ಮಂದಿ ಭುಟ್ಟೋ ಹತ್ಯೆಯ ಕುರಿತ ಮಾಹಿತಿಯನ್ನು ಬಿಚ್ಚಿಟ್ಟಲ್ಲಿ ನಿಜಕ್ಕೂ ವಿಚಾರಣಾ ಆಯೋಗಕ್ಕೆ ಹೆಚ್ಚಿನ ಸಹಾಯಕವಾಗಲಿದೆ ಎಂಬುದು ಜರ್ದಾರಿ ಅವರ ಆಶಯವಾಗಿದೆ ಎಂದು ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ