ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್: ಅಪರಿಚಿತನ ಗುಂಡಿಗೆ ಇರಾಕ್ ಅಧಿಕಾರಿ ಬಲಿ (Iraq | health official | gunned down | home | Mohammed Jalab)
Bookmark and Share Feedback Print
 
ಇರಾಕ್‌ನ ಹಿರಿಯ ಅಧಿಕಾರಿಯೊಬ್ಬರನ್ನು ಅವರ ಮನೆಯಲ್ಲೇ ಶಸ್ತ್ರ ಸಜ್ಜಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರೆ, ಮತ್ತೊಂದು ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ಹತ್ಯೆಗೈದಿರುವುದನ್ನು ನಗರದ ಹೊರಭಾಗದಲ್ಲಿ ಪತ್ತೆಹಚ್ಚಲಾಗಿದೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಆರೋಗ್ಯ ಸಚಿವಾಲಯದ ಸಹಾಯಕ ಪ್ರಧಾನ ನಿರ್ದೇಶಕರಾಗಿರುವ ಮೊಹಮ್ಮದ್ ಜಾಲಾಬ್ ಆಹ್ಮದ್ ಅವರನ್ನು ಮನೆಯ ಗಾರ್ಡ್‌ನಲ್ಲಿಯೇ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆಗೈದಿದ್ದ.

ಉತ್ತರ ಬಾಗ್ದಾದ್‌ನ ಸಾಲಿಖ್‌ನಲ್ಲಿರುವ ಅಹ್ಮದ್ ಮನೆಯಲ್ಲಿಯೇ ಈ ಕೃತ್ಯ ಎಸಗಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇರಾಕ್‌ನಲ್ಲಿ ಇಂತಹ ಸ್ಥಿತಿ ಮತ್ತಷ್ಟು ಹೆಚ್ಚಳವಾಗತೊಡಗಿದೆ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ಗುಂಡು ಹೊಡೆದು ಸಾಯಿಸಿದ್ದು, ಅವರಿಬ್ಬರ ಶವ ಬಾಗ್ದಾದ್ ಉತ್ತರ ಭಾಗದ ಬಾಸ್ಟೀನ್ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಅವರಿಬ್ಬರಿಗೂ ಸಾಕಷ್ಟು ಚಿತ್ರಹಿಂಸೆ ನೀಡಿ ಹತ್ಯೆಗೈಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ