ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಹಿಳೆ ಬಿಯರ್ ಕುಡಿದಿದ್ದಕ್ಕೆ ಛಡಿ ಏಟಿನ ಶಿಕ್ಷೆಯಿಂದ ಬಚಾವ್: ಮಲೇಶ್ಯಾ (Malaysia | Muslim woman | Kartika Sari Dewi | Islamic society)
Bookmark and Share Feedback Print
 
ಮನುಷ್ಯನ ವೈಯಕ್ತಿಕ ವಿಷಯಗಳಿಗೆ ಮಲೇಶ್ಯಾದ ಇಸ್ಲಾಮಿಕ್ ಕಾನೂನು ಮೂಗುತೂರಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಘಟನೆ ಕೊನೆಗೂ ಸುಲ್ತಾನ್ ಅವರ ಸಮಾಜಸೇವೆ ಮಾಡಿಸುವ ನಿರ್ಧಾರದೊಂದಿಗೆ ಮುಕ್ತಾಯ ಕಂಡಿದ್ದು, ಬೀಚ್‌ನಲ್ಲಿ ಬಿಯರ್ ಕುಡಿದ ಮುಸ್ಲಿಮ್ ಮಹಿಳೆಗೆ ಛಡಿ ಏಟಿನ ಶಿಕ್ಷೆ ಬದಲು ಸಮಾಜ ಸೇವೆ ಮಾಡಲು ಹೇಳಿದೆ.

ಈ ನಿರ್ಧಾರ ತನಗೆ ಅನಿರೀಕ್ಷಿತವಾಗಿದ್ದು, ನನಗೆ ಗೊಂದಲದ ಭಾವನೆ ಮೂಡುತ್ತಿದೆ. ನಿಜಕ್ಕೂ ನನಗೆ ಆಘಾತವಾಗಿದೆ ಎಂದು ಎರಡು ಮಕ್ಕಳ ತಾಯಿಯಾಗಿರುವ 33ರ ಹರೆಯದ ಕಾರ್ತಿಕಾ ಸಾರಿ ದೇವಿ ಸುಕಾರ್ಣೋ ಅವರು ಶಿಕ್ಷೆಯ ಆದೇಶದ ಪತ್ರ ಸಿಕ್ಕ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾರ್ವಜನಿಕವಾಗಿಯೇ ಬಿಯರ್ ಕುಡಿದ ಘಟನೆ ಕುರಿತಂತೆ ಛಡಿ ಏಟಿ ಬದಲು ಮೂರು ವಾರಗಳ ಕಾಲ ಸಮಾಜ ಸೇವೆ ಮಾಡುವಂತೆ ಸ್ಟೇಟ್ ಸುಲ್ತಾನ್ ನಿರ್ಧರಿಸಿರುವುದಾಗಿ ಬುಧವಾರ ಸುಕಾರ್ಣೋಗೆ ಪಾಹಾಂಗ್ ಸ್ಟೇಟ್ ಇಸ್ಲಾಮಿಕ್ ಇಲಾಖೆ ಕಳುಹಿಸಿರುವ ಪತ್ರದಲ್ಲಿ ವಿವರಿಸಿದೆ. ಆ ನಿಟ್ಟಿನಲ್ಲಿ ಸುಕಾರ್ಣೋ ಇದೀಗ ಶುಕ್ರವಾರದಿಂದ ಚಿಲ್ಡ್ರನ್ಸ್ ಹೋಮ್‌ನಲ್ಲಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಜನರ ವೈಯಕ್ತಿಕ ವಿಷಯದಲ್ಲಿಯೂ ಮಲೇಷ್ಯಾದ ಇಸ್ಲಾಮಿಕ್ ಕಾನೂನು ಮೂಗು ತೂರಿಸುವುದು ಸರಿಯೇ ಎಂಬಂತೆ ಈ ಪ್ರಕರಣ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದೀಗ ಸುಲ್ತಾನ್ ಕೈಗೊಂಡ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ.

2007ರ ಡಿಸೆಂಬರ್‌ನಲ್ಲಿ ಕಾರ್ತಿಕಾ ಬೀಚ್ ರಿಸಾರ್ಟ್‌ನಲ್ಲಿ ಬಿಯರ್ ಕುಡಿದಿದ್ದಕ್ಕೆ ಇಸ್ಲಾಮಿಕ್ ಕಾನೂನಿನ ಪ್ರಕಾರ 2008ರ ಜುಲೈ ತಿಂಗಳಿನಲ್ಲಿ ಆರು ಛಡಿ ಏಟಿನ ಶಿಕ್ಷೆ ವಿಧಿಸಿತ್ತು. ಆದರೆ ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಹೆಚ್ಚಿನ ಶಿಕ್ಷೆಗೂ ತಡೆ ಬಿದ್ದಿದ್ದು, ದೇಶದ ಸುಲ್ತಾನ್ ನೀಡುವ ತೀರ್ಪಿಗೆ ತಾನು ಬದ್ದ ಎಂದು ಸುಕಾರ್ಣೋ ಆ ಸಂದರ್ಭದಲ್ಲಿ ತಿಳಿಸಿದ್ದರು. ಇದೀಗ ಸುಲ್ತಾನ್ ಛಡಿ ಏಟಿನ ಅಗತ್ಯವಿಲ್ಲ ಎನ್ನುವ ಮೂಲಕ ಸುಕಾರ್ಣೋ ಬಾಕಿ ಉಳಿದ ಶಿಕ್ಷೆಯನ್ನು ಪೂರೈಸಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ