ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಲ್ಲಿ ಹಿಂದೂ ದೇವಾಲಯಗಳನ್ನ ಒಡೆದಿಲ್ಲ: ಹಿಂದೂ ಸಂಘಟನೆ (Lord Krishna | temple | demolish | Pakistan Hindu Council | Karachi)
Bookmark and Share Feedback Print
 
ಪಾಕಿಸ್ತಾನದ ವಾಣಿಜ್ಯ ನಗರಿಯಲ್ಲಿ ಹಿಂದೂ ದೇವಾಲಯಗಳಿಗೆ ಸಂಬಂಧಪಟ್ಟಂತೆ ಭೂ ತಕರಾರು ಇದೆಯಾದರೂ ಕೂಡಾ, ಶ್ರೀಕೃಷ್ಣ ದೇವಾಲಯ ಸೇರಿದಂತೆ ಯಾವುದೇ ದೇವಾಲಯಗಳನ್ನು ಒಡೆದು ಹಾಕಿಲ್ಲ ಎಂದು ಪಾಕಿಸ್ತಾನದ ಹಿಂದೂ ಸಂಘಟನೆಗಳು ಗುರುವಾರ ಸ್ಪಷ್ಟನೆ ನೀಡಿವೆ.

ಇಲ್ಲಿನ ಎಂ.ಎ.ಜಿನ್ನಾ ರಸ್ತೆಯಲ್ಲಿನ ಸ್ವಾಮಿ ನಾರಾಯಣ ದೇವಾಲಯ ಸೇರಿದಂತೆ ಹಲವು ದೇವಾಲಯಗಳ ಜಮೀನು ಸ್ವಾಧೀನ ಕುರಿತಂತೆ ತಕರಾರು ತಲೆದೋರಿದೆ. ಆದರೆ ಯಾವುದೇ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿಲ್ಲ ಎಂದು ಪ್ಯಾಟರ್ನ್ ಆಫ್ ಪಾಕಿಸ್ತಾನ್ ಹಿಂದೂ ಕೌನ್ಸಿಲ್(ಪಿಎಚ್‌ಸಿ)ನ ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ಒಡೆದು ಹಾಕಲಾಗಿದೆ ಎಂಬ ವಿಷಯವನ್ನು ಕುಮಾರ್ ಹಾಗೂ ಪಿಎಚ್‌ಸಿಯ ಪ್ರಧಾನ ಕಾರ್ಯದರ್ಶಿ ಹರಿ ಮೋಟ್‌ವಾನಿ ಸಾರಸಗಟಾಗಿ ತಳ್ಳಿಹಾಕಿದ್ದಾರೆ.

ಹಿಂದೂ ದೇವಾಯಲಯಕ್ಕೆ ಸಂಬಂಧಿಸಿದಂತೆ ಕೆಲವು ಅಪಸ್ವರ ಎದ್ದಿರುವುದನ್ನು ನಾವು ಮನಗಂಡಿದ್ದೇವೆ. ಹಾಗಂತ ನಾವು ಅದನ್ನು ನಿರ್ಲಕ್ಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಹಿಂದೂ ದೇವಾಲಯಗಳ ಭೂ ವಿವಾದದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸುವುದಾಗಿಯೂ ಹೇಳಿದ್ದಾರೆ.

ಕರಾಚಿಯಲ್ಲಿರುವ ಶ್ರೀಕೃಷ್ಣ ದೇವಾಲಯವನ್ನು ಒಡೆದು ಹಾಕಲಾಗಿದೆ ಎಂದು ಭಾರತದ ನ್ಯೂಸ್ ಚಾನೆಲ್‌ಗಳು ಸುದ್ದಿ ಬಿತ್ತರಿಸಿರುವುದಕ್ಕೆ ಪ್ರತಿಯಾಗಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ