ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದ್ಯಾಭ್ಯಾಸದ ಫೀಸ್ ಕಟ್ಟಲು ಟಾಪ್‌ಲೆಸ್ ಆಗಲು ಸಿದ್ಧ! (pose topless | London | female students | university,)
Bookmark and Share Feedback Print
 
ಮನುಷ್ಯ ಹೊಟ್ಟೆಪಾಡಿಗಾಗಿ ಏನೆಲ್ಲಾ ಕಸರತ್ತು ಮಾಡುತ್ತಾನೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ ವಿದ್ಯಾಭ್ಯಾಸಕ್ಕಾಗಿ ಅಗತ್ಯವಿರುವ ಹಣಕ್ಕಾಗಿ ಬ್ರಿಟನ್‌ನ ಸುಮಾರು 10ಮಂದಿ ಯುವತಿಯರಲ್ಲಿ ನಾಲ್ಕು ಮಂದಿ ಅರೆನಗ್ನ ಪ್ರದರ್ಶನಕ್ಕೆ ರೆಡಿ ಎಂಬುದಾಗಿ ನೂತನ ಸಮೀಕ್ಷೆಯೊಂದು ತಿಳಿಸಿದೆ!

ವಿದ್ಯಾಭ್ಯಾಸಕ್ಕಾಗಿ ಯುವತಿಯರು ಅರೆನಗ್ನ ಭಂಗಿಯಲ್ಲಿ ಕಾಣಿಸಿಕೊಳ್ಳಲು ಎಷ್ಟು ಮಂದಿ ಇಷ್ಟ ಪಡುತ್ತಾರೆ ಎಂಬ ಬಗ್ಗೆ ಸುಮಾರು ಒಂದು ಸಾವಿರ ಯೂನಿರ್ವಸಿಟಿ ವಿದ್ಯಾರ್ಥಿನಿಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಅಲ್ಲದೇ ಹತ್ತರಲ್ಲಿ ಮೂರು ಮಂದಿಯಷ್ಟು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಹಾಯಕವಾಗುವ ನಿಟ್ಟಿನಲ್ಲಿ ಜಂಟಲ್‌ಮನ್ಸ್ ಕ್ಲಬ್‌ನಲ್ಲಿ ಕರ್ತವ್ಯ ನಿರ್ವಹಸಿಲು ಒಲವು ತೋರಿರುವ ಬಗ್ಗೆಯೂ ಸಮೀಕ್ಷೆ ವಿವರಿಸಿದೆ.

ಆದರೆ ವಿದ್ಯಾಭ್ಯಾಸದ ಖರ್ಚಿಗಾಗಿ ಯೂನಿರ್ವಸಿಟಿಯ ಬೆತ್ತಲೆ ಪ್ರದರ್ಶನ ಕ್ಲಬ್‌ (ಸ್ಟ್ರಿಪ್ ಕ್ಲಬ್)ಗೆ ಸೇರಲು ಸುಮಾರು ಶೇ.2ರಷ್ಟು ವಿದ್ಯಾರ್ಥಿನಿಯರು ಆಸಕ್ತಿ ಹೊಂದಿದ್ದಾರೆಂದು ಸರ್ವೆ ಹೇಳಿದೆ. ಇದರಲ್ಲಿ ಬಹುತೇಕರು ನಮಗೆ ಕೆಲಸ ದೊರೆಯುತ್ತದೆ. ಆದರೆ ಅರೆನಗ್ನ ಪ್ರದರ್ಶನದಿಂದ ತುಂಬಾ ಸುಲಭವಾಗಿ ಹಣ ಸಂಪಾದಿಸಬಹುದು ಎಂಬ ಅಭಿಪ್ರಾಯ ಅವರದ್ದಂತೆ!

ಅಲ್ಲದೇ ಹತ್ತರಲ್ಲಿ ಮೂರು ಮಂದಿಯಂತೆ ಹಣಕ್ಕಾಗಿ ಬಟ್ಟೆ ಇಲ್ಲದೆ ದೇಹ ಪ್ರದರ್ಶನಕ್ಕೆ ಸಹಮತ ವ್ಯಕ್ತಪಡಿಸಿದ್ದರೆ, ಇದರಲ್ಲಿ ಬಹುತೇಕ ಕೆಲವು ವಿದ್ಯಾರ್ಥಿನಿಯರು ಹಣಕ್ಕಾಗಿ ವಿನೂತನ ಶೈಲಿಯ ನರ್ತನ ಮಾಡಲು ತಯಾರು ಎಂಬುದಾಗಿ ಹೇಳಿದ್ದಾರೆ.

ಇದರಲ್ಲಿ ಶೇ.47ರಷ್ಟು ವಿದ್ಯಾರ್ಥಿನಿಯರು ರೂಪದರ್ಶಿಯಾಗಿ ಕಾರ್ಯನಿರ್ವಹಿಸಲು ಒಲವು ವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ಹೇಳಿದೆ. ಒಟ್ಟಾರೆ ನಗ್ನವೋ, ಅರೆನಗ್ನವೋ ತಾವೇ ಹಣ ಸಂಪಾದಿಸಿ ಇನ್ನೊಬ್ಬರಿಗೆ ಭಾರವಾಗದಂತೆ ಜೀವನ ಸಾಗಿಸುವ ಉದ್ದೇಶ ಈ ವಿದ್ಯಾರ್ಥಿಗಳದ್ದಂತೆ.
ಸಂಬಂಧಿತ ಮಾಹಿತಿ ಹುಡುಕಿ