ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ; ಜರ್ದಾರಿ ಇನ್ಮುಂದೆ 'ರಬ್ಬರ್ ಸ್ಟ್ಯಾಂಪ್' ಅಧ್ಯಕ್ಷ (Asif Ali Zardari | Constitutional amendment | President`s powers)
Bookmark and Share Feedback Print
 
PTI
ಪಾಕಿಸ್ತಾನ ಅಧ್ಯಕ್ಷರ ಅಧಿಕಾರ ಮೊಟಕು ಸೇರಿದಂತೆ ಸಂವಿಧಾನ ತಿದ್ದುಪಡಿ ಮಸೂದೆ ಪಾಕಿಸ್ತಾನ ಸಂಸತ್‌ನಲ್ಲಿ ಶುಕ್ರವಾರ ಮಂಡನೆಯಾಗುವ ಮೂಲಕ ಜರ್ದಾರಿ ಇನ್ಮುಂದೆ ಕೇವಲ ನಾಮಕಾವಸ್ತೆ ಅಧ್ಯಕ್ಷರಾಗಲಿದ್ದು, ಪ್ರಧಾನಿ ಗಿಲಾನಿ ಹೆಚ್ಚಿನ ಅಧಿಕಾರ ಹೊಂದಲಿದ್ದಾರೆ.

ಪಾಕಿಸ್ತಾನ ಅಧ್ಯಕ್ಷರ ಅಧಿಕಾರ ಮೊಟಕು ಮಸೂದೆಗೆ ಗ್ರೀನ್ ಸಿಗ್ನಲ್ ದೊರೆಯುವ ಮೂಲಕ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಹೆಚ್ಚಿನ ಅಧಿಕಾರ ಹೊಂದುವಂತಾಗಿದೆ.

ಇದು ಪಾಕಿಸ್ತಾನ ಸಂವಿಧಾನದ 18ನೇ ತಿದ್ದುಪಡಿಯ ನೂತನ ಮಸೂದೆಯಾಗಿದೆ. ಇದೀಗ ಮಸೂದೆ ಸಂಸತ್‌ನಲ್ಲಿ ಮಂಡನೆಯಾಗಿದ್ದು,ಏಪ್ರಿಲ್ 5ರಂದು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ಮಸೂದೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತಾಪಿತ ನೂತನ ಮಸೂದೆಯಿಂದಾಗಿ ಅಧ್ಯಕ್ಷ ಜರ್ದಾರಿ ಅವರ ಕೆಲವು ಅಧಿಕಾರಗಳು ಮೊಟಕುಗೊಳ್ಳಲಿದೆ. ಅದರಲ್ಲಿ ಸಂಸತ್ ವಿಸರ್ಜನೆ ಹಾಗೂ ದೇಶದ ನೌಕಾದಳ, ಭೂಸೇನೆ, ವಾಯುದಳದ ವರಿಷ್ಠರ ನೇಮಕ ಮಾಡುವ ಅಧಿಕಾರ ಕೂಡ ಇಲ್ಲ. ಆದರೂ ಜರ್ದಾರಿ ಪಾಕಿಸ್ತಾನದಲ್ಲಿ ಪ್ರಭಾವಶಾಲಿ ವ್ಯಕ್ತಿ ಎಂಬುದಾಗಿ ವಿಶ್ವಾಸವಿರಿಸಿಕೊಂಡಿದ್ದಾರೆ. ಯಾಕೆಂದರೆ ತಮ್ಮ ಪಿಪಿಪಿ ಪಕ್ಷದ ಮೇಲೆ ಹಿಡಿತವಿಟ್ಟುಕೊಂಡಿದ್ದು, ಚುನಾವಣೆಯಲ್ಲಿ ಗೆದ್ದು ಮತ್ತೆ ಪಾಕ್ ಪ್ರಧಾನಿ ಪಟ್ಟವನ್ನು ಅಲಂಕರಿಸುವ ಕನಸು ಹೊತ್ತುಕೊಂಡಿದ್ದಾರೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸಂಸತ್‌ನಲ್ಲಿ ನೂತನವಾಗಿ ಮಂಡನೆಯಾಗಿರುವ ಮಸೂದೆ ಬಗ್ಗೆ ಪ್ರತಿಕ್ರಿಯಿಸಿರುವ ಪಿಪಿಪಿಯ ಸೆನೆಟರ್ ರಾಜಾ ರಬ್ಬಾನಿ, ಇಂದು ಐತಿಹಾಸಿಕ ದಿನವಾಗಿದೆ. ನೂತನ ಮಸೂದೆ ಮಂಡನೆಯಾಗಿರುವ ಈ ದಿನವನ್ನು ಮಾಜಿ ಪ್ರಧಾನಿ ದಿ.ಬೆನಜೀರ್ ಭುಟ್ಟೋ ಅವರಿಗೆ ಸಮರ್ಪಿಸಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ