ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್‌ನಲ್ಲಿ ಉಗ್ರರಿಂದ ಜಪಾನ್ ಪತ್ರಕರ್ತನ ಅಪಹರಣ (Japanese journalist | Afghanistan | Taliban | Russia's Chechnya)
Bookmark and Share Feedback Print
 
ಅಫ್ಘಾನಿಸ್ತಾನಕ್ಕೆ ವರದಿ ಮಾಡಲು ತೆರಳಿದ್ದ ಜಪಾನಿನ ಫ್ರೀಲ್ಯಾನ್ಸ್ ಪತ್ರಕರ್ತನೊಬ್ಬ ನಾಪತ್ತೆಯಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದ್ದು, ಆತ ಸ್ಥಳೀಯ ಗೈಡ್ ಜೊತೆ ತಾಲಿಬಾನ್ ಹಿಡಿತವುಳ್ಳ ಪ್ರದೇಶದ ಒಳಹೊಕ್ಕ ಸಂದರ್ಭದಲ್ಲಿ ಅಪಹರಿಸಲಾಗಿತ್ತು ಎಂದು ಹೇಳಿದೆ.

ತಾಲಿಬಾನ್ ಪ್ರಾಬಲ್ಯ ಹೊಂದಿದ್ದ ಪ್ರದೇಶದಲ್ಲಿ ನಾಪತ್ತೆಯಾಗಿರುವ ಜಪಾನಿನ ಪತ್ರಕರ್ತ ಕೋಸುಕೆ ತ್ಸುನೆವೋಕಾ (40) ಎಲ್ಲಿದ್ದಾರೆಂಬ ಬಗ್ಗೆ ಈವರೆಗೂ ತಿಳಿದುಬಂದಿಲ್ಲ.

ತ್ಸುನೆವೋಕಾ ರಷ್ಯಾ,ಚೆಚೆನ್ಯಾ, ಇರಾಕ್ ಮತ್ತು ಅಫ್ಘಾನಿಸ್ತಾನದ ಘರ್ಷಣೆ ಕುರಿತು ವರದಿ ಮಾಡುವ ನಿಟ್ಟಿನಲ್ಲಿ ಕಳೆದ ತಿಂಗಳು ಅಫ್ಘಾನಿಸ್ತಾನಕ್ಕೆ ಆಗಮಿಸಿದ್ದರು. ಆ ನಿಟ್ಟಿನಲ್ಲಿ ಕಾಬೂಲ್ ಮತ್ತು ಜಲಾಲಾಬಾದ್‌ಗೂ ಭೇಟಿ ನೀಡಿರುವುದಾಗಿ ಟೋಕಿಯೋ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ (ಟಿಬಿಎಸ್) ವರದಿ ಹೇಳಿದೆ.

ತಾನು ಬುಧವಾರ ಬೆಳಿಗ್ಗೆ ತಾಲಿಬಾನ್ ಹಿಡಿತದಲ್ಲಿರುವ ಪ್ರದೇಶಕ್ಕೆ ಹೋಗುತ್ತಿರುವುದಾಗಿ ತ್ಸುನೆವೋಕಾ ಅವರು ಮಂಗಳವಾರ ಬೆಳಿಗ್ಗೆ ಟ್ವಿಟ್ಟರ್‌ನಲ್ಲಿ ಕೊನೆಯ ಬರಹವನ್ನು ಹಾಕಿದ್ದರು.

ಪತ್ರಕರ್ತನನ್ನು ಅಪಹರಿಸಲಾಗಿದೆ ಎಂದು ಅನಾಮಿಕ ಸ್ಥಳೀಯ ಗೈಡ್ ತಿಳಿಸಿರುವುದಾಗಿ ವರದಿ ವಿವರಿಸಿದ್ದು, ಆದರೆ ಪತ್ರಕರ್ತ ಯಾವ ಪ್ರದೇಶಕ್ಕೆ ಭೇಟಿ ನೀಡಿದ್ದ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ