ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಳ್ಳ ಬಸಿರು; ಚೀನಾ ಹೊಳೆಯಲ್ಲಿ 21 ಭ್ರೂಣ ಪತ್ತೆ! (Babies | river in China | foetuses | abortions,)
Bookmark and Share Feedback Print
 
21 ಶಿಶುಗಳ ಶವಗಳನ್ನು ನದಿಯಲ್ಲಿ ಪತ್ತೆ ಹಚ್ಚಿರುವ ಚೀನಾದ ಅಧಿಕಾರಿಗಳು, ಘಟನೆ ಕುರಿತಂತೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಭ್ರೂಣಗಳನ್ನು ಈಶಾನ್ಯ ಭಾಗದ ಶಾನ್‌ಡಾಂಗ್‌ನ ಆಸ್ಪತ್ರೆಯಲ್ಲಿ ತೆಗೆಯಲಾಗಿತ್ತು.

ಅಕ್ರಮವಾಗಿ ಬಸಿರಾಗಿರುವವರು ಆಸ್ಪತ್ರೆಯಲ್ಲಿ ಭ್ರೂಣವನ್ನು ತೆಗೆಯಿಸಿದ ನಂತರ ನದಿಗೆ ಎಸೆದಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಆಸ್ಪತ್ರೆಯ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವುದಾಗಿ ಹೇಳಿದೆ.

ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಂಡ ನಂತರ ಭ್ರೂಣವನ್ನು ವಿಲೇವಾರಿ ಮಾಡುವಂತೆ ಕುಟುಂಬವರ್ಗ ಆಸ್ಪತ್ರೆಗೆ ಹಣ ಪಾವತಿಸಿತ್ತು. ಆದರೆ ಆಸ್ಪತ್ರೆಯವರು ಸುಮಾರು 21 ಭ್ರೂಣವನ್ನು ನದಿಗೆ ಎಸೆದಿರುವುದಾಗಿ ವಿವರಿಸಿದ್ದಾರೆ.

ಆದರೆ ನದಿಯಲ್ಲಿ ಪತ್ತೆಹಚ್ಚಿರುವ ಶಿಶುಗಳ ಲಿಂಗವಾಗಲಿ, ವಯಸ್ಸನ್ನು ಗುರುತಿಸುವುದು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾದ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಶಿಶು, ಭ್ರೂಣಗಳ ಹತ್ಯೆ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದಾಗಿಯೂ ಹೇಳಿದರು.

ಆದರೆ ಹೆಣ್ಣು ಭ್ರೂಣಗಳ ಹತ್ಯೆ, ಗರ್ಭಪಾತವನ್ನು ಈ ಆಧುನಿಕ ಸಮಾಜದಲ್ಲಿ ಒಪ್ಪಲು ಸಾಧ್ಯವಿಲ್ಲ ಎಂದು ಶಾನ್‌ಡಾಂಗ್ ಯೂನಿರ್ವಸಿಟಿಯ ಸಹಾಯಕ ಡೀನ್ ಮಾ ಗುವಾಂಗಾಯ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ