ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಉಗ್ರಗಾಮಿ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಲಿ: ಅಮೆರಿಕ (Lashkar-e-Taiba | Pakistan | Swat Valley | Obama, India,)
Bookmark and Share Feedback Print
 
ಪಾಕಿಸ್ತಾನದ ಗಡಿಪ್ರದೇಶದಲ್ಲಿ ಅಟ್ಟಹಾಸಗೈಯುತ್ತಿರುವ ಲಷ್ಕರ್ ಇ ತೊಯ್ಬಾ ಸೇರಿದಂತೆ ಎಲ್ಲಾ ಉಗ್ರಗಾಮಿ ಸಂಘಟನೆಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಅಮೆರಿಕ ಮತ್ತೊಮ್ಮೆ ಒತ್ತಾಯಿಸಿದ್ದು, ಇದರಿಂದ ಕೇವಲ ಭಾರತಕ್ಕೆ ಮಾತ್ರ ಮುಖ್ಯವಲ್ಲ, ಅಮೆರಿಕಕ್ಕೂ ಕೂಡ ಪ್ರಮುಖವಾದ ವಿಷಯ ಎಂದು ಹೇಳಿದೆ.

ಇತ್ತೀಚೆಗಷ್ಟೇ ಅಮೆರಿಕದ ದಕ್ಷಿಣ ಮತ್ತು ಸೆಂಟ್ರಲ್ ಏಷ್ಯಾದ ಸಹಾಯಕ ಕಾರ್ಯದರ್ಶಿ ರೋಬೆರ್ಟ್ ಬ್ಲೇಕ್ ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ನಂತರ ಈ ಸಂದೇಶವನ್ನು ರವಾನಿಸಿದೆ.

ಅಲ್ಲದೇ ಅದೇ ರೀತಿಯಲ್ಲಿ ಪಂಜಾಬ್ ಮೂಲದ ( ಬಬ್ಬರ್ ಖಾಲ್ಸಾ) ಉಗ್ರಗಾಮಿ ಸಂಘಟನೆಯ ವಿರುದ್ಧವೂ ಸಹ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವುದಾಗಿ ಅಮೆರಿಕ ಹೇಳಿದೆ. ಆ ನಿಟ್ಟಿನಲ್ಲಿ ಪಾಕಿಸ್ತಾನ ಲಷ್ಕರ್ ಸೇರಿದಂತೆ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ಹೊಂದಿರುವುದಾಗಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ