ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗರ್ಭಪಾತದ ಸ್ಪೆಶಲಿಸ್ಟ್ ವೈದ್ಯನ ಹಂತಕನಿಗೆ 50ವರ್ಷ ಜೈಲು! (abortion doctor's | Scott Roeder | life sentence | Dr. George Tiller)
Bookmark and Share Feedback Print
 
ಅವಧಿ ಮೀರಿದ ನಂತರವೂ ಗರ್ಭಪಾತ ಮಾಡಿಸುವ ಸಾಮರ್ಥ್ಯ ಹೊಂದಿದ್ದ ಅಮೆರಿಕದ ಕೆಲವೇ ವೈದ್ಯರಲ್ಲೊಬ್ಬರಾದ ಡಾ.ಜಾರ್ಜ್ ಟಿಲ್ಲರ್ ಎಂಬುವರನ್ನು ಗುಂಡಿಕ್ಕಿ ಕೊಂದ ಹಂತಕ ಸ್ಕಾಟ್ ರೋಯಿಡರ್ ಎಂಬುವನಿಗೆ ಇಲ್ಲಿನ ಕೋರ್ಟ್ 50ವರ್ಷಗಳ ಸೆರಮನೆವಾಸ ಶಿಕ್ಷೆ ವಿಧಿಸಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ವಿಚಿತಾ ಆಸ್ಪತ್ರೆಯಲ್ಲಿ ಸ್ಕಾಟ್ ರೋಯಿಡರ್ ಡಾ.ಜಾರ್ಜ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ಶಿಕ್ಷೆಯ ಅವಧಿಯಲ್ಲಿ ಅವನು ಎಷ್ಟೇ ಒಳ್ಳೆಯತನದಿಂದ ವರ್ತಿಸಿದರೂ ಆತನಿಗೆ ಪೆರೋಲ್ ಸಿಗುವುದಿಲ್ಲ ಎಂಬುದಾಗಿ ಈಗಾಗಲೇ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆದರೆ 'ಇನ್ನೊಂದು ಮುಗ್ಧ ಮಗುವಿನ ಕೊಲೆ ಮಾಡಲಾಗದಂತೆ ನಾನೀಗ ಅವನನ್ನು ತಡೆದಿದ್ದೇನೆ' ಎಂದು ಸ್ಕಾಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಡಾ.ಟಿಲ್ಲರ್ ಇಲ್ಲದ ವಿಚಿತ ಆಸ್ಪತ್ರೆ ಈಗ ಸುರಕ್ಷಿತ ಎಂದು ಆತ ಹೇಳಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ