ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗರ್ಭಪಾತ ಮಾತ್ರೆ ಸೇವಿಸಬೇಡಿ; ಕ್ರಿಶ್ಚಿಯನ್‌ರಿಗೆ ಪೋಪ್ (Abortion pill | Pope Benedict XVI | Italy | Christians)
Bookmark and Share Feedback Print
 
ಗರ್ಭಪಾತಕ್ಕೆ ಕಾರಣವಾಗುವ ಮಾತ್ರೆಗಳ ಮಾರಾಟಕ್ಕೆ ಪೋಪ್ 16ನೇ ಬೆನಡಿಕ್ಟ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿ, ಈ ಮಾತ್ರೆಗಳ ಕ್ರಿಶ್ಚಿಯನ್ ಸಮುದಾಯದವರು ಬಹಿಷ್ಕರಿಸಬೇಕೆಂದು ಕರೆ ನೀಡಿದ್ದಾರೆ.

ಗರ್ಭಪಾತಕ್ಕೆ ಕಾರಣವಾಗುವ ಮಾತ್ರೆಗಳನ್ನು ಇಟಲಿಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹೇಳಿಕೆ ಹೊರಬಿದ್ದ ಕಾರಣ ಜನರಲ್ಲಿ ಉಂಟಾಗಿದ್ದ ಗೊಂದಲವನ್ನು ಗಮನಿಸಿದ ಪೋಪ್, ದೋಷಯುಕ್ತ ವಿಷಯವನ್ನು ರಕ್ಷಣೆ ಮಾಡುವ ಕಾನೂನನ್ನು ಕ್ರಿಶ್ಚಿಯನ್ ಸಮುದಾಯದವರು ಅನುಸರಿಸಬಾರದು ಎಂದು ಕರೆ ನೀಡಿದ್ದಾರೆ.

ಗುರುವಾರ ಈ ಮಾತ್ರೆ ಇಟಲಿಯ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, ಅದೇ ದಿನ ಈಸ್ಟರ್ ಪೂರ್ವದ ಸಮಾವೇಶ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಪೋಪ್ ಮಾತ್ರೆಗಳ ಬಗ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕೆಟ್ಟ ವಿಷಯಗಳನ್ನು ಅನುಸರಿಸದೇ ಇರುವುದು ಕ್ರಿಶ್ಚಿಯನ್ನರಿಗೆ ಮಹತ್ವದ್ದಾಗಿದೆ. ಅಮಾಯಕ ಭ್ರೂಣಗಳನ್ನು ಹತ್ಯೆ ಮಾಡುವ ಈ ಮಾತ್ರೆಯೂ ಕೆಟ್ಟದ್ದಾಗಿದೆ ಎಂದು ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನಡೆದ ಸಮಾವೇಶದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ