ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೌದು...ನಾನು ಕಪ್ಪು ಜನಾಂಗದವ: ಬರಾಕ್ ಘೋಷಣೆ (Barack Obama | Black | US President | Kenya | African-American)
Bookmark and Share Feedback Print
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು 2010ರ ಜನಗಣತಿ ಪ್ರಶ್ನೆಗೆ ತಾನು ಆಫ್ರಿಕನ್-ಅಮೆರಿಕನ್ ಎಂದು ಅಧಿಕೃತವಾಗಿ ತಿಳಿಸುವ ಮೂಲಕ ತಾನು ಕಪ್ಪು ಜನಾಂಗದ ವ್ಯಕ್ತಿ ಎಂದು ಘೋಷಿಸಿದಂತಾಗಿದೆ.

ತಾನು ಕೀನ್ಯಾದ ಕಪ್ಪು ಜನಾಂಗದ ತಂದೆ ಹಾಗೂ ಕಾನ್ಸಾ ಮೂಲದ ಬಿಳಿ ಜನಾಂಗದ ತಾಯಿಯ ಮಗನಾಗಿರುವುದಾಗಿ ಬರಾಕ್ ಒಬಾಮ ಅವರು ಜನಗಣತಿಯಲ್ಲಿ ಮಾಹಿತಿ ದಾಖಲಿಸಿರುವುದಾಗಿ ಶ್ವೇತಭವನದ ವಕ್ತಾರ ತಿಳಿಸಿರುವುದಾಗಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ.

ಬರಾಕ್ ಒಬಾಮ ಅವರ ಜನ್ಮಸ್ಥಳ ಹವೈ. ಹಾಗಾಗಿ ಬರಾಕ್ ಅವರು ಯಾವುದೇ ದೇಶವನ್ನು ಆಯ್ಕೆ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಜನಗಣತಿಯಲ್ಲಿ ಸುಮಾರು 12ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ಇತ್ತು. ಆದರೆ ಬರಾಕ್ ಅವರು ಆಫ್ರಿಕನ್ (ನಿಗ್ರೋ) ಮೂಲವನ್ನೇ ಆಯ್ಕೆ ಮಾಡಿ ತಾನು ಕಪ್ಪು ಜನಾಂಗೀಯ ಎಂಬುದನ್ನು ಅಧಿಕೃತವಾಗಿ ಘೋಷಿಸಿದಂತಾಗಿದೆ.

ಜನಗಣತಿ ಪ್ರಶ್ನೆಯ ಅರ್ಜಿಯಲ್ಲಿ ಬಿಳಿಯ, ಕಪ್ಪು-ಬಿಳಿ ಜನಾಂಗ ಹಾಗೂ ಕೆಲವು ಬೇರೆ ಜನಾಂಗವನ್ನು ಆಯ್ಕೆ ಮಾಡುವ ಅವಕಾಶ ಇತ್ತು. ಆದರೆ ಬರಾಕ್ ಕಪ್ಪು ಜನಾಂಗವನ್ನೇ ಆಯ್ಕೆ ಮಾಡಿದ್ದರು ಎಂದು ಸೆನ್ಸಸ್ ಬ್ಯುರೋ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ