ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್ ಮಿಲಿಟರಿ ಸಮವಸ್ತ್ರಧಾರಿ ವ್ಯಕ್ತಿಯ ಗುಂಡಿಗೆ 25 ಬಲಿ (Baghdad | Iraqi | Sunni area | Gunmen | Sahwa | shootings)
Bookmark and Share Feedback Print
 
ಇರಾಕ್ ಮಿಲಿಟರಿಯ ಸಮವಸ್ತ್ರ ಧರಿಸಿದ್ದ ಶಸ್ತ್ರಧಾರಿ ವ್ಯಕ್ತಿಯೊಬ್ಬ ದಕ್ಷಿಣ ಬಾಗ್ದಾದ್‌ನ ಸುನ್ನಿ ಗ್ರಾಮದಲ್ಲಿನ ಮನೆಗಳಿಗೆ ದಾಳಿ ನಡೆಸಿ ಐದು ಮಂದಿ ಮಹಿಳೆಯರು ಸೇರಿದಂತೆ 25ಜನರನ್ನು ಹತ್ಯೆಗೈದಿರುವುದಾಗಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಗನ್‌ಧಾರಿ ವ್ಯಕ್ತಿಯೊಬ್ಬ ಈ ಸಾಮೂಹಿಕ ಹತ್ಯಾಕಾಂಡ ನಡೆಸಿದ ನಂತರ, ಇರಾಕ್ ಅಧಿಕಾರಿಗಳು ಹಂತಕನ ಬಂಧನಕ್ಕಾಗಿ ತೀವ್ರ ಶೋಧಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಸಾವನ್ನಪ್ಪಿದವರಲ್ಲಿ ಬಹುತೇಕರು ಸ್ಥಳೀಯ ಸಾವಾ ಸದಸ್ಯರಾಗಿದ್ದಾರೆ. ಇವರೆಲ್ಲಾ 2006 ಮತ್ತು 2007ರಲ್ಲಿ ಇರಾಕ್‌ನಲ್ಲಿ ಅಲ್ ಖಾಯಿದಾ ವಿರುದ್ಧ ಹೋರಾಡಲು ಅಮೆರಿಕದ ಸೈನಿಕರ ಜೊತೆ ಕೈಜೋಡಿಸಿದ್ದರು. ಆ ಹಿನ್ನೆಲೆಯಲ್ಲಿ ಪ್ರತಿಕಾರ ಎಂಬಂತೆ ಈ ಹತ್ಯಾಕಾಂಡ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬಾಗ್ದಾದ್‌ನಿಂದ 25ಕಿ.ಮೀ.ದೂರದಲ್ಲಿರುವ ಅರಬ್ ಜಾಬುರ್ ಪ್ರದೇಶದಲ್ಲಿನ ಹಳ್ಳಿಗೆ ಶುಕ್ರವಾರ ಶಸ್ತ್ರಸಜ್ಜಿತ ವ್ಯಕ್ತಿ ಈ ದಾಳಿ ನಡೆಸಿರುವುದಾಗಿ ಸಾವಾ ಮುಖಂಡ ಮುಸ್ತಾಫಾ ಕಾಮೆಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ