ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದಲ್ಲಿ ಬಾಂಗ್ಲಾ ಮಹಿಳೆಗೆ ಪ್ರಸವ; ದಂಪತಿಗೆ ಬಂಧನ ಭೀತಿ (Bangladeshi woman | Indian hospital | Asma Bibi | Shajahan)
Bookmark and Share Feedback Print
 
ಅಂತಾರಾಷ್ಟ್ರೀಯ ಗಡಿ ಭಾಗದ ಬಾಂಗ್ಲಾದೇಶ ಗ್ರಾಮದ ಮಹಿಳೆಯೊಬ್ಬಳು ಭಾರತದ ಕೂಚ್ ಬೆಹಾರ್ ಆಸ್ಪತ್ರೆಯಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದು, ಇದೀಗ ಬಂಧನ ಭೀತಿ ಎದುರಿಸುತ್ತಿದ್ದಾಳೆ. ಭಾರತದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಆಕೆ ಸಮರ್ಥ ದಾಖಲೆಗಳನ್ನ ಹೊಂದಿಲ್ಲದೇ ಇರುವುದರಿಂದ ಬಂಧಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಆಸ್ಮಾ ಬೀಬಿ ಎಂಬ 25ರ ಹರೆಯದ ಮಹಿಳೆ ಸೋಮವಾರ ತೀವ್ರತರ ಪ್ರಸವ ವೇದನೆಯಿಂದ ಬಳಲುತ್ತಿದ್ದಳು. ಹಾಗಾಗಿ ತಕ್ಷಣ ಸಾಗಿಸಬಹುದಾದ ಪಕ್ಕದ ಆಸ್ಪತ್ರೆ ದಿನ್ಹಾತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾನವೀಯತೆಯ ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಯಿತು ಎಂದು ಆಸ್ಪತ್ರೆಯ ಅಧೀಕ್ಷಕ ನಿಖಿಲ್ ದಾಸ್ ತಿಳಿಸಿದ್ದಾರೆ.

ಆಸ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಬಾಂಗ್ಲಾದೇಶದ ಕಡೆಯಲ್ಲಿ ಪಕ್ಕದಲ್ಲಿ ಯಾವುದೇ ಆಸ್ಪತ್ರೆ ಇಲ್ಲದೇ ಇದ್ದ ಕಾರಣ ಪತ್ನಿ ತೀವ್ರ ನೋವಿನಿಂದ ಬಳಲುತ್ತಿದ್ದುದರಿಂದ ಗಂಡ ಶಾಜಹಾನ್ ಭಾರತ - ಬಾಂಗ್ಲಾದೇಶ ಸಹಕಾರ ವಿನಿಮಯ ಸಮಿತಿಯನ್ನು ಸಂಪರ್ಕಿಸಿದ್ದರು. ನಂತರ ಭದ್ರತಾ ಸಿಬ್ಬಂದಿಗಳ ನೆರವಿನೊಂದಿಗೆ ಆಕೆಯನ್ನು ಭಾರತದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಇದೀಗ ಅಗತ್ಯ ದಾಖಲೆಗಳನ್ನು ಹೊಂದಿಲ್ಲದೆ ಭಾರತದಲ್ಲಿ ವೈದ್ಯಕೀಯ ಸೌಲಭ್ಯ ಪಡೆದುಕೊಂಡಿರುವುದಕ್ಕಾಗಿ ಬಾಂಗ್ಲಾದೇಶ ದಂಪತಿಯನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಆದರೆ ಸ್ಥಳೀಯ ಆಡಳಿತವು ಈ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ದಿನ್ಹಾತ್ತಾ ಉಪ ವಿಭಾಗಾಧಿಕಾರಿ ಚಿರಂಜಿಬ್ ಘೋಷ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ