ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಸಬ್‌ಗೆ ರೆಡ್ ಕಾರ್ನರ್ ನೊಟೀಸ್‌; ಇಂಟರ್ಪೋಲ್‌‌ಗೆ ಪಾಕ್ ಮೊರೆ (Interpol Red Corner Notice | Mumbai terror attack | Ajmal Kasab | Fahim Ansari)
Bookmark and Share Feedback Print
 
ಪ್ರಸಕ್ತ ಭಾರತದಲ್ಲಿ ವಿಚಾರಣೆ ಎದುರಿಸುತ್ತಿರುವ ಅಜ್ಮಲ್ ಕಸಬ್ ಮತ್ತು ಫಹೀಂ ಅನ್ಸಾರಿಯವರನ್ನು ಬಂಧಿಸಲು ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡುವಂತೆ ಪಾಕಿಸ್ತಾನ ಇಂಟರ್ಪೋಲ್ ಮೊರೆ ಹೋಗಿದ್ದು, ಮುಂಬೈ ಭಯೋತ್ಪಾದನಾ ದಾಳಿಗೆ ಮಹತ್ವದ ತಿರುವು ದೊರಕಿದೆ.

ಮುಂಬೈ ಭಯೋತ್ಪಾದನಾ ದಾಳಿ ಪಿತೂರಿದಾರರಾದ ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಝಾಕೀರ್ ರೆಹ್ಮಾನ್ ಲಖ್ವಿ ಸೇರಿದಂತೆ ಏಳು ಮಂದಿ ಆರೋಪಿಗಳ ವಿರುದ್ಧದ ವಿಚಾರಣೆ ಸಂದರ್ಭದಲ್ಲಿ ಸರಕಾರಿ ವಿಶೇಷ ವಕೀಲ ಮಲಿಕ್ ರಬ್ ನವಾಜ್ ಮೂನ್ ಅವರು ಭಯೋತ್ಪಾದನಾ ತಡೆ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 17ಕ್ಕೆ ಮುಂದೂಡಲಾಗಿದೆ.

ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟಿರುವ ಏಳು ಮಂದಿಯನ್ನು ಭಾರತದ ವಶದಲ್ಲಿರುವ ಕಸಬ್ ಮತ್ತು ಅನ್ಸಾರಿಯವರನ್ನು ಪ್ರತ್ಯೇಕಿಸಿ ವಿಚಾರಣೆ ನಡೆಸುವಂತಿಲ್ಲ ಎಂದು ಲಾಹೋರ್ ಹೈಕೋರ್ಟ್ ತೀರ್ಪು ನೀಡಿರುವುದರಿಂದ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಗರಿಷ್ಠ ಸಮಯ ಬೇಕೆಂದು ಪ್ರಾಸಿಕ್ಯೂಷನ್ ಕೇಳಿಕೊಂಡ ಕಾರಣ ಭದ್ರತಾ ಕಾರಣಗಳಿಂದಾಗಿ ರಾವಲ್ಪಿಂಡಿಯ ಆಡಿಯಾಲಾ ಜೈಲಿನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಮಲಿಕ್ ಮೊಹಮ್ಮದ್ ಅಕ್ರಮ್ ಅವಾನ್ ಮುಂದೂಡಿದ್ದಾರೆ.

ಅಲ್ಲದೆ ಕಸಬ್ ಮತ್ತು ಅನ್ಸಾರಿಯವರನ್ನು 'ತಪ್ಪಿಸಿಕೊಂಡ ಅಪರಾಧಿಗಳು' ಎಂದು ಘೋಷಿಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ಭಯೋತ್ಪಾದನಾ ತಡೆ ನ್ಯಾಯಾಲಯವು ತಿರಸ್ಕರಿಸಿರುವುದರಿಂದ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ತನಗೆ ಹೆಚ್ಚು ಸಮಯ ಬೇಕಾಗಿದೆ ಎಂದು ಸರಕಾರಿ ವಕೀಲರು ಮನವಿ ಮಾಡಿಕೊಂಡಿದ್ದರು.

ಹಾಗಾಗಿ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 17ರವರೆಗೆ ನ್ಯಾಯಮೂರ್ತಿ ಆವಾನ್ ಮುಂದೂಡಿದ್ದಾರೆ. ಈ ಸಂದರ್ಭದಲ್ಲಿ ಅನ್ಸಾರಿ ಮತ್ತು ಕಸಬ್ ವಿರುದ್ಧ ರೆಡ್ ಕಾರ್ನರ್ ನೊಟೀಸ್‌ಗಳನ್ನು ಜಾರಿ ಮಾಡುವಂತೆ ಇಂಟರ್ಪೋಲನ್ನು ಸಂಪರ್ಕಿಸಲು ಸರಕಾರವನ್ನು ಕೇಳಿಕೊಂಡಿದೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.

ಕಸಬ್ ಮತ್ತು ಅನ್ಸಾರಿಯವರು ಭಾರತದ ಪೊಲೀಸರ ವಶದಲ್ಲಿರುವುದರಿಂದ ಅವರು ತಲೆ ಮರೆಸಿಕೊಂಡಿರುವ ಆರೋಪಿಗಳಲ್ಲ ಎಂದು ಇದೇ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರು ವಾದಿಸಿದರು. ನಂತರ ಪ್ರತಿಕ್ರಿಯಿಸಿದ ಸರಕಾರಿ ವಕೀಲ ಆವಾನ್, ಕಸಬ್ ಮತ್ತು ಅನ್ಸಾರಿ ವಿರುದ್ಧ ರೆಡ್ ಕಾರ್ನರ್ ನೊಟೀಸ್‌ಗಳನ್ನು ಜಾರಿ ಮಾಡಲು ಇಂಟರ್ಪೋಲನ್ನು ಸಂಪರ್ಕಿಸಲಾಗಿದೆ ಎಂದರು.

ನಾವು ಇಂದು ಮತ್ತು ನಾಳೆ ಮಾತುಕತೆ ನಡೆಸುತ್ತಿದ್ದು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಇತ್ತೀಚಿನ ಆದೇಶಗಳ ವಿರುದ್ಧ ಮನವಿ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಆವಾನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ