ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫ್ರಾನ್ಸ್ ಜಗತ್ತಿನಲ್ಲಿಯೇ ಹೆಚ್ಚು ಸ್ನೇಹಪರವಲ್ಲದ ರಾಷ್ಟ್ರ! (Earth | Most Unfriendly | Germans | Russia | Belgium,)
Bookmark and Share Feedback Print
 
ಇಡೀ ಜಗತ್ತಿನಲ್ಲಿಯೇ ಫ್ರಾನ್ಸ್ ಹೆಚ್ಚು ಸ್ನೇಹಪರವಲ್ಲದ ರಾಷ್ಟ್ರವಾಗಿದೆ ಎಂದು ಜನಾಭಿಪ್ರಾಯ ಸಂಗ್ರಹದಿಂದ ಬಹಿರಂಗಗೊಂಡಿದೆ ಎಂದು ವರದಿಯೊಂದು ತಿಳಿಸಿದೆ.

ಅಲ್ಲದೇ ಫ್ರಾನ್ಸ್ ನಂತರದ ಸ್ಥಾನವನ್ನು ಜರ್ಮನ್ ಪಡೆದಿದ್ದರೆ, ಇನ್ನುಳಿದಂತೆ ಸ್ಪೈನಿಯಾರ್ಡ್ಸ್, ಇಟಲಿ ಮತ್ತು ಟರ್ಕಿಯನ್ನರು ಕೂಡ ಸ್ನೇಹಪರವಲ್ಲದ ಸಾಲಿಗೆ ಸೇರಿರುವುದಾಗಿ ಡೈಲಿ ಸ್ಟಾರ್ ವರದಿ ಹೇಳಿದೆ.

ರಷ್ಯಾ, ಬೆಲ್ಜಿಯಂ, ಪೋರ್ಚುಗಲ್, ಚೀನಾ ಹಾಗೂ ಗ್ರೀಸ್ ಸಹ ಜಗತ್ತಿನ 10ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. ಭೂಮಂಡಲದಲ್ಲಿ ಬದುಕಲು ಸಾಧ್ಯವಿಲ್ಲ ಎಂಬಂತಹ, ಸ್ನೇಹಪರವಲ್ಲದ ರಾಷ್ಟ್ರ ಯಾವುದು ಎಂಬ ಬಗ್ಗೆ ಒನ್‌ಪೋಲ್ ಡಾಟ್ ಕಾಮ್ ಬ್ರಿಟನ್‌ನಲ್ಲಿ ನೆಲೆಸಿರುವ ಸುಮಾರು 3ಸಾವಿರ ಮಂದಿ ಯುರೋಪಿಯನ್‌ರ ಅಭಿಪ್ರಾಯ ಸಂಗ್ರಹಿಸಿ ಈ ಅಂಕಿ-ಅಂಶ ಕಲೆಹಾಕಲಾಗಿದೆ ಎಂದು ತಿಳಿಸಿದೆ. ಸದಾ ತಿಕ್ಕಾಟದಲ್ಲಿಯೇ ಇರುವ ಫ್ರೆಂಚ್ ಜನರು ತಪ್ಪು ಹಾದಿಯಲ್ಲಿ ಸಾಗುತ್ತಿರುವುದರಿಂದ ಸ್ನೇಹರಹಿತ ವ್ಯಕ್ತಿಗಳಾಗಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ