ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಪತ್ರಕರ್ತನ ಪ್ರಕಾರ ಲಾಡೆನ್ ಇನ್ನೂ ಬದುಕಿದ್ದಾನೆ (Pakistani journalist | Rahimullah Yusufzai | Al Qaeda | Osama bin Laden)
Bookmark and Share Feedback Print
 
ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು 1998ರಲ್ಲಿ ಎರಡೆರಡು ಬಾರಿ ಸಂದರ್ಶನ ಮಾಡಿದ್ದ ಪಾಕಿಸ್ತಾನದ ಜನಪ್ರಿಯ ಪತ್ರಕರ್ತ ರಹೀಮುಲ್ಲಾ ಯೂಸುಪ್ ಪ್ರಕಾರ ವಿಶ್ವಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಇನ್ನೂ ಬದುಕಿದ್ದಾನೆ.

ಅಮೆರಿಕಾ ನಡೆಸಿರುವ ವಾಯುದಾಳಿಯಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿ ಸಂಚುಕೋರ ಗಂಭೀರ ಗಾಯಗೊಂಡು ಅಥವಾ ಕಿಡ್ನಿ ಸಮಸ್ಯೆಗಳಿಂದ ಆತ ಸಾವನ್ನಪ್ಪಿರಬಹುದು ಎಂಬ ವಾದಗಳನ್ನು ಒಪ್ಪಿಕೊಳ್ಳದ ಯೂಸುಫ್ ಪ್ರಕಾರ ಒಸಾಮಾ ಸ್ವಭಾವತಃ ನಾಚಿಕೆ ಮತ್ತು ವಿನೀತ.

ಒಸಾಮಾ ಸತ್ತಿರುವುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಿಲ್ಲ ಎನ್ನುವ 56ರ ಹರೆಯದ ಯೂಸುಫ್, ಹಾಗೆಲ್ಲಾದರೂ ಸಾವನ್ನಪ್ಪಿರುತ್ತಿದ್ದರೆ ಅಲ್‌ಖೈದಾ ಅದನ್ನು ಮುಚ್ಚಿಡಲಾರದು ಎಂದಿದ್ದಾರೆ.

ನಾನು ನೋಡಿದ ಮತ್ತು ನನ್ನ ಅನುಭವದ ಪ್ರಕಾರ ಅಲ್‌ಖೈದಾ ತನ್ನ ಸದಸ್ಯರು ಸತ್ತಾಗ ಅದನ್ನು ಒಪ್ಪಿಕೊಂಡಿದೆ. ಹಾಗಾಗಿ ಒಂದು ವೇಳೆ ಒಸಾಮಾ ಬಿನ್ ಲಾಡೆನ್ ಸತ್ತರೆ, ಅವರು ಖಂಡಿತಾ ಅದನ್ನು ಒಪ್ಪಿಕೊಳ್ಳುತ್ತಾರೆ. ಅಂತಹ ಸುದ್ದಿಯಿದ್ದರೆ ಅದನ್ನು ಅವರು ಮುಚ್ಚಿಡಲಾರರು. ಮಾತಿನ ಮೂಲಕ, ಸಂದೇಶದ ಮೂಲಕ ಇಲ್ಲವೇ ಯಾವುದಾದರೂ ವೆಬ್‌ಸೈಟ್ ಮೂಲಕ ತಮ್ಮ ಸುದ್ದಿಯನ್ನು ಮುಟ್ಟಿಸುತ್ತಿದ್ದರು. ಅವರು ತೊಂದರೆಯಾಗಿರುವುದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಹುತಾತ್ಮರಾದರೆ ಅದನ್ನು ಮೆಚ್ಚುತ್ತಾರೆ ಎಂದು ಯೂಸುಫ್ ಹೇಳಿದ್ದಾರೆಂದು ವೆಬ್‌ಸೈಟೊಂದು ವರದಿ ಮಾಡಿದೆ.

80ರ ದಶಕದಿಂದ ಪಾಕಿಸ್ತಾನ ಮತ್ತು ಅಫಘಾನಿಸ್ತಾನದಲ್ಲಿ ವರದಿಗಾರಿಕೆ ಕೆಲಸ ಮಾಡುತ್ತಿರುವ ಪಾಕಿಸ್ತಾನದ ಅನುಭವಿ ಪತ್ರಕರ್ತನ ಪ್ರಕಾರ ಲಾಡೆನ್ ಅಫಘಾನಿಸ್ತಾನದಲ್ಲೇ ಇದ್ದಾನೆ.

ಯೂಸುಫ್ ಇದುವರೆಗೆ 1995ರಿಂದ 2001ರ ನಡುವೆ ತಾಲಿಬಾನ್ ಕಮಾಂಡರ್ ಮುಲ್ಲಾ ಮೊಹಮ್ಮದ್ ಒಮರ್‌ನನ್ನು 13 ಬಾರಿ ಸಂದರ್ಶನ ಮಾಡಿದ್ದಾರೆ. ಅವರ ಪ್ರಕಾರ ಲಾಡೆನ್ ಮತ್ತೊಬ್ಬರಿಗೆ ಗೌರವ ನೀಡುವ ವ್ಯಕ್ತಿ.

ನಾನು ನೋಡಿದಂತೆ ಲಾಡೆನ್ ವಿನೀತ ಮತ್ತು ಮತ್ತೊಬ್ಬರಿಗೆ ಗೌರವ ನೀಡುವ ವ್ಯಕ್ತಿ. ಅಪ್ಪಿಕೊಂಡು ಹಸ್ತಲಾಘವ ನೀಡುವುದು ಆತನಿಗೆ ಇಷ್ಟ. ಆತನ ಕೈಗಳು ಮೃದುವಾಗಿರುವುದು ಆತನ ಶ್ರೀಮಂತ ಹಿನ್ನೆಲೆಯನ್ನು ಬಿಂಬಿಸುತ್ತದೆ ಎಂದು ಮೊದಲ ಬಾರಿ ಭೇಟಿ ಮಾಡಿದಾಗಿನ ವಿವರಗಳನ್ನು ಹಂಚಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ