ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾದೇಶದಲ್ಲಿ ಏಳು ಜೆಎಂಬಿ ಭಯೋತ್ಪಾದಕರ ಬಂಧನ (terrorists | Islamist group JMB | Mymensingh district | Bangladesh)
Bookmark and Share Feedback Print
 
ಭಾರತದ ಗಡಿ ಪ್ರದೇಶ ಮಿಮೆನ್ಸಿಂಗ್ ಜಿಲ್ಲೆಯಲ್ಲಿ ಮರುಸಂಘಟನೆಗೊಳ್ಳಲು ಯತ್ನಿಸುತ್ತಿದ್ದ ನಿಷೇಧಿತ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಜೆಎಂಬಿ ಅಗ್ರ ಕಮಾಂಡರ್ ಸೇರಿದಂತೆ ಏಳು ಮಂದಿ ಉಗ್ರರನ್ನು ಬಾಂಗ್ಲಾದೇಶ ಭದ್ರತಾ ಪಡೆಗಳು ಬಂಧಿಸಿವೆ.

'ಜಮಾತುಲ್ ಇಸ್ಲಾಂ ಮುಜಾಹಿದೀನ್ ಬಾಂಗ್ಲಾದೇಶ್' ಸಂಘಟನೆಯ ಮಿಮೆನ್ಸಿಂಗ್ ವಲಯದಲ್ಲಿನ ಪ್ರಮುಖ ನಿರ್ಣಯ ವಿಭಾಗದ (ಮಜ್ಲಿಸ್ ಇ ಶೂರಾ) ಸದಸ್ಯ ಮೊಹಮ್ಮದ್ ಅಬ್ದುಲ್ ಮಲೇಕ್ ಆಲಿಯಾಸ್ ಮೂಸಾ ಮತ್ತು ಸಂಘಟನೆಗೆ ಸೇರಿದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ರ‌್ಯಾಪಿಡ್ ಆಕ್ಷನ್ ಬೆಟಾಲಿಯನ್ ತಿಳಿಸಿದೆ.

ಬಂಧನಕ್ಕೊಳಗಾಗಿರುವ ಇತರರನ್ನು ಅಹ್ಸಾನ್ ಜಹೀರ್ ಖಾನ್, ಮೊಹಮ್ಮದ್ ರಫೀಕುಲ್ ಇಸ್ಲಾಂ, ಫಾರೂಕ್ ಹೊಸೈನ್, ಮೊಹಮ್ಮದ್ ಶಾಹಿದುಲ್ಲಾಹ್, ಮೊಹಮ್ಮದ್ ಅಮೀನುಲ್ ಇಸ್ಲಾಂ ಮತ್ತು ಮೊಹಮ್ಮದ್ ಅಬ್ದುಲ್ ಹಲೀಂ ಎಂದು ಗುರುತಿಸಲಾಗಿದೆ.

ಫುಲ್ಬಾರಿಯಾ ಉಪ ವಿಭಾಗದಲ್ಲಿನ ಮದುವೆ ಔತಣಕೂಟಕ್ಕೆ ಭಯೋತ್ಪಾದಕರು ತೆರಳುತ್ತಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಇಲ್ಲಿ ಉಗ್ರರು ರಹಸ್ಯ ಸಭೆಯೊಂದನ್ನು ನಡೆಸುವ ಉದ್ದೇಶ ಹೊಂದಿದ್ದರು ಎಂದು ಭದ್ರತಾ ಪಡೆಯ ಕಾನೂನು ಮತ್ತು ಮಾಧ್ಯಮ ವಿಭಾಗದ ನಿರ್ದೇಶಕ ಮೊಹಮ್ಮದ್ ಸೊಹೈಲ್ ತಿಳಿಸಿದ್ದಾರೆಂದು 'ದಿ ಡೈಲಿ ಸ್ಟಾರ್' ಪತ್ರಿಕೆ ವರದಿ ಮಾಡಿದೆ.

ಇಸ್ಲಾಮಿಕ್ ಭಯೋತ್ಪಾದಕರು ಮರು ಸಂಘಟನೆಗೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಈ ಹಿಂದಿನ ಎಚ್ಚರಗಳ ನಡುವೆಯೇ ಪ್ರತಿಕ್ರಿಯಿಸಿರುವ ಸೊಹೈಲ್, ಭಯೋತ್ಪಾದಕರೀಗ ತೀರಾ ದುರ್ಬಲಗೊಂಡಿದ್ದಾರೆ ಮತ್ತು ನೂತನ ನೇಮಕಾತಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳಾದ ಜೆಎಂಬಿ ಮತ್ತು ಹರ್ಕತುಲ್ ಜಿಹಾದ್ ಇಸ್ಲಾಮಿಗಳು (ಹುಜಿ) ಕಳೆದ ಹಲವಾರು ವರ್ಷಗಳಿಂದ ಶರಿಯತ್ ಆಧರಿತ ಇಸ್ಲಾಮಿಕ್ ರಾಷ್ಟ್ರವನ್ನು ರಚಿಸುವ ಉದ್ದೇಶದಿಂದ ಕುಕೃತ್ಯಗಳನ್ನು ನಡೆಸುತ್ತಾ ಬಂದಿದ್ದು, ನೂರಾರು ಮಂದಿಯನ್ನು ಹತ್ಯೆಗೈದಿದೆ.
ಸಂಬಂಧಿತ ಮಾಹಿತಿ ಹುಡುಕಿ