ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾನು ಎಂದೆಂದೂ ಭಾರತೀಯ ಸಂಜಾತ ಕಲಾವಿದ: ಎಂ.ಎಫ್. ಹುಸೇನ್ (MF Husain | Legendary artist | Qatar | Indian-born painter)
Bookmark and Share Feedback Print
 
ತಾನು ಹುಟ್ಟಿದ ರಾಷ್ಟ್ರದ ಜತೆಗಿನ ಸಂಬಂಧವನ್ನು ಯಾವುದೇ ಕಾರಣಕ್ಕೂ ಕಡಿದುಕೊಳ್ಳುವುದಿಲ್ಲ ಎಂದು ಇತ್ತೀಚೆಗಷ್ಟೇ ಕತಾರ್ ಪೌರತ್ವವನ್ನು ಸ್ವೀಕರಿಸಿರುವ ಕುಂಚ ಕಲಾವಿದ ಎಂ.ಎಫ್. ಹುಸೇನ್ ಹೇಳಿದ್ದು, ಯಾವತ್ತೂ ನಾನು ಭಾರತೀಯ ಸಂಜಾತ ಕಲಾಕಾರನಾಗಿಯೇ ಉಳಿದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಭಾರತೀಯ ಸಂಜಾತ ಕಲಾವಿದನಾಗಿಯೇ ಉಳಿದುಕೊಳ್ಳುತ್ತೇನೆ. ನನ್ನ ಮೇಲೆ ಇದಕ್ಕೆ ಯಾವುದೇ ನಿಷೇಧವಿಲ್ಲ ಎಂದು ಇತ್ತೀಚೆಗಷ್ಟೇ ಭಾರತದ ಪಾಸ್‌ಪೋರ್ಟನ್ನು ದೋಹಾದಲ್ಲಿ ಒಪ್ಪಿಸಿದ್ದ ಹುಸೇನ್ 'ದಿ ಟೈಮ್ಸ್' ಪತ್ರಿಕೆಯ ಜತೆ ತಿಳಿಸಿದ್ದಾರೆಂದು ವರದಿ ಮಾಡಿದೆ.

ಆದರೆ ಈ 94ರ ಹರೆಯ ಹುಸೇನ್ ಭಾರತಕ್ಕೆ ಭೇಟಿ ನೀಡಲಿರುವ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಅವರ ವಕೀಲರುಗಳು ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದು ಈ ಹಿನ್ನೆಲೆ ಮತ್ತು ಹಿಂಸಾಚಾರ ನಡೆಯಬಹುದು ಎಂಬ ಭೀತಿ ಅವರಿಗಿದೆ ಎಂದು ಪತ್ರಿಕೆ ತಿಳಿಸಿದೆ.

ನನಗೆ ಭದ್ರತೆಯನ್ನು ಒದಗಿಸುವುದಾಗಿ ಭಾರತೀಯ ಗೃಹ ಕಾರ್ಯದರ್ಶಿ ಹೇಳುತ್ತಿದ್ದಾರೆ. ಮಾಜಿ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಿಗೆ ಕಡಿಮೆ ಭದ್ರತೆಯನ್ನು ಒದಗಿಸಲಾಗಿತ್ತೇ. ಅವರಿಬ್ಬರನ್ನೂ ಹತ್ಯೆ ಮಾಡಲಾಗಿಲ್ಲವೇ ಎಂದು ಇದೇ ಸಂದರ್ಭದಲ್ಲಿ ಹುಸೇನ್ ಪ್ರಶ್ನಿಸಿದ್ದಾರೆ.

ಸಂಪೂರ್ಣ ಶಾಂತಿ ಮತ್ತು ನೆಮ್ಮದಿಯಿರುವ ಸ್ಥಳದಲ್ಲಿ ಕೆಲಸ ಮಾಡಲು ಬಯಸುವ ಜೀವನದ ಘಟ್ಟದಲ್ಲಿ ನಾನಿದ್ದೇನೆ. ಈ ವಯಸ್ಸಿನಲ್ಲಿ ನಾನು ಒಂದು ಕೊಠಡಿಯಲ್ಲಿ ಕುಳಿತು ಹೊರಗೆ ಹೋಗದೆ ಇರಲಾರೆ ಎಂದು ತಿಳಿಸಿದ್ದಾರೆ.

ಅದೇ ಹೊತ್ತಿಗೆ ತಾನು ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಜತೆ ನೂತನ ಬ್ರಿಟೀಷ್ ಮ್ಯೂಸಿಯಂ ಕುರಿತು ಮಾತುಕತೆ ನಡೆಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ನಾನು ಕವನ, ಸಿನಿಮಾ, ಪೈಂಟಿಂಗ್ ಹೀಗೆ ಹಲವು ರಂಗಗಳಲ್ಲಿ ಗುರುತಿಸಿಕೊಂಡಿದ್ದೇನೆ. ಇದರಲ್ಲಿ ಯಾವುದಾದರೂ ಒಂದು ಯಶಸ್ವಿಯಾಗಬಹುದು ಎಂದು ನಂಬಿಕೆಯಿಟ್ಟಿದ್ದೆ. ಕಳೆದ ಹತ್ತು ವರ್ಷಗಳ ನನ್ನ ಅವಧಿಯಲ್ಲಿ ಇದಕ್ಕೆ ಸಾಕಷ್ಟು ವಿರೋಧಗಳನ್ನೂ ಎದುರಿಸಿದೆ ಎಂದು ಹುಸೇನ್ ತನ್ನ ಹಾದಿಯನ್ನು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ