ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಏಸು ಕ್ರಿಸ್ತನ ತಂದೆ ಬಡಗಿಯಲ್ಲ, ವಾಸ್ತುಶಿಲ್ಪಿ: ಬೈಬಲ್ ಪಂಡಿತ (Jesus Christ | carpenter | Adam Bradford | The Jesus Discovery)
Bookmark and Share Feedback Print
 
ಏಸು ಕ್ರಿಸ್ತ ಬಡಗಿಯ ಪುತ್ರನಲ್ಲ, ಮಧ್ಯಮ ವರ್ಗದ ವಾಸ್ತುಶಿಲ್ಪಿಯ ಮಗ. ತಪ್ಪು ಅನುವಾದದಿಂದಾಗಿ ಇಂತಹ ಗೊಂದಲಗಳು ಕಾಣಿಸಿಕೊಂಡಿದ್ದವು ಎಂದು ಬೈಬಲ್ ಪಂಡಿತರೊಬ್ಬರು ಹೇಳಿದ್ದಾರೆ.

ಓರ್ವ ಬಡಗಿ (ಕಾರ್ಪೆಂಟರ್) ತಂದೆಗೆ ಕ್ರಿಸ್ತ ಹುಟ್ಟಿದ್ದಾರೆ ಎಂದು ಹೇಳುವುದಕ್ಕಿಂತಲೂ ಓರ್ವ ಮಧ್ಯಮ ವರ್ಗದ ಯಶಸ್ವಿ ಮತ್ತು ಭಾರೀ ಬುದ್ಧಿಮತ್ತೆಯ ವಾಸ್ತುತಜ್ಞನಿಗೆ (ಆರ್ಕಿಟೆಕ್ಟ್) ಜನಿಸಿದ್ದರು ಎಂದು ಹೇಳುವುದು ವಾಸ್ತವಕ್ಕೆ ಹತ್ತಿರವಾಗುತ್ತದೆ ಎಂದು ಆಡಮ್ ಬ್ರಾಡ್‌ಫಾರ್ಡ್ ವಾದಿಸುತ್ತಿದ್ದಾರೆ.

ಈ ಹಿಂದೆ ಜೀಸಸ್ ಜೀವನದ ಕುರಿತು ಹೇಳಿಕೊಂಡು ಬರಲಾಗುತ್ತಿದ್ದ ಕಥೆಗಿಂತ ಇದು ಭಿನ್ನವಾಗಿದೆ ಎಂದು 'ಡೈಲೀ ಮೇಲ್' ಪತ್ರಿಕೆ ವರದಿ ಮಾಡಿದೆ.
PR

'ದಿ ಜೀಸಸ್ ಡಿಸ್ಕವರಿ' (ಏಸು ಕ್ರಿಸ್ತನ ಶೋಧನೆ) ಎಂಬ ಬ್ರಾಡ್‌ಫಾರ್ಡ್ ಬರೆದಿರುವ ಪುಸ್ತಕದಲ್ಲಿ ಇದನ್ನು ವಿವರಿಸಲಾಗಿದೆ. ಏಸು ಕ್ರಿಸ್ತನ 12ರಿಂದ 30ರ ವಯಸ್ಸಿನ ನಡುವೆ ತಿಳಿದಿಲ್ಲ ಎಂದು ಹೇಳಲಾಗಿರುವ ವಿಚಾರಗಳನ್ನು ಕೂಡ ಬ್ರಾಡ್‌ಫಾರ್ಡ್ ವಿವರಿಸಿದ್ದು, ಅವರ ಪ್ರಕಾರ ಏಸು ಈ ಸಂದರ್ಭದಲ್ಲಿ ಧಾರ್ಮಿಕ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದರು. ನಂತರ ಇಸ್ರೇಲ್‌ನ ಜೆಡಿಯಾದಲ್ಲಿನ ಗರಿಷ್ಠ ಮಾನ್ಯತೆಯ 'ರಬ್ಬಿ'ಯಾಗಿ (ಶಿಕ್ಷಕ) ಕಾರ್ಯನಿರ್ವಹಿಸಿದ್ದರು.

ಗ್ರೀಕ್ ಮತ್ತು ಹೀಬ್ರೂ ಮೂಲ ಗ್ರಂಥಗಳನ್ನು ಓದಿದ ನಂತರ ಏಸುವಿನ ನಿಜವಾದ ಹಿನ್ನೆಲೆಯನ್ನು ತಾನು ಬಹಿರಂಗಪಡಿಸಿರುವುದಾಗಿ ಬ್ರಾಡ್‌ಫಾರ್ಡ್ ಇಲ್ಲಿ ಹೇಳಿಕೊಂಡಿದ್ದಾರೆ.

ಅವರ ವಾದದ ಪ್ರಕಾರ 'ಟೆಕ್ಟಾನ್' ಎಂಬ ಗ್ರೀಕ್ ಪದವನ್ನು ಜೀಸಸ್ ತಂದೆ ಜೋಸೆಫ್ ಅವರ ವೃತ್ತಿಯನ್ನು ಹೆಸರಿಸಲು ಬಳಸಲಾಗಿತ್ತು. ಕ್ರಿಸ್ತನ ವ್ಯಕ್ತಿತ್ವ ನಿರೂಪನೆಯಲ್ಲಿ ಮೂಲಭೂತ ಅಪಾರ್ಥಗಳುಂಟಾಗಲು ಈ ತಪ್ಪು ಅನುವಾದವೂ ಒಂದು ಕಾರಣ ಎಂದು ಅವರು ವಿವರಿಸುತ್ತಾರೆ.

ಗ್ರೀಕ್ ಪದ 'ಟೆಕ್ಟಾನ್' ಅರ್ಥ ಸಾಮಾನ್ಯವಾಗಿ ಕಾರ್ಪೆಂಟರ್ ಎಂದಾಗಿದೆಯಾದರೂ, ಇದರ ವಿಶಾಲಾರ್ಥ ಶ್ರೇಷ್ಠ ಕಟ್ಟಡ ತಜ್ಞ ಅಥವಾ ವಾಸ್ತುಶಿಲ್ಪಿ ಎನ್ನುವುದು ಸಮರ್ಥನೀಯವಾಗುತ್ತದೆ ಎಂದು ಬ್ರಾಡ್‌ಫಾರ್ಡ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ