ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದಲ್ಲಿ ಬರಲಿದೆ ಮುಶರಫ್ ನೂತನ ಪಕ್ಷ ಎಪಿಎಂಎಲ್‌ (Pakistan | Pervez Musharraf | All Pakistan Muslim League | APML)
Bookmark and Share Feedback Print
 
ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಶರಫ್ 'ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್' (ಎಪಿಎಂಎಲ್) ಎಂದು ಹೆಸರಿಸಲಾಗಿರುವ ತನ್ನ ನೂತನ ಪಕ್ಷವನ್ನು ಮುಂದಿನ ವಾರ ಘೋಷಿಸುವ ಸಾಧ್ಯತೆಗಳಿವೆ.

ನಿಸಾರ್ ಮುಹಮ್ಮದ್ ಖಾನ್ ಮತ್ತು ಶೇರ್ ಅಫ್ಗಾನ್ ನೈಜಿ ಸೇರಿದಂತೆ ಪಾಕಿಸ್ತಾನ ಮುಸ್ಲಿಂ ಲೀಗ್-ಖೈದ್ (ಪಿಎಂಎಲ್-ಕ್ಯೂ) ಪಕ್ಷದ ಸುಮಾರು ಎರಡು ಡಜನ್‌ಗೂ ಹೆಚ್ಚು ಅತೃಪ್ತ ನಾಯಕರು ಪ್ರಸಕ್ತ ಅಬುಧಾಬಿಯಲ್ಲಿದ್ದು, ಮುಶರಫ್ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಈ ರಹಸ್ಯ ಬೆಳವಣಿಗೆಗಳ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ.

ಮುಶರಫ್ ಅವರ ಆಪ್ತರೊಬ್ಬರ ಪ್ರಕಾರ ಈಗಾಗಲೇ ಏಪ್ರಿಲ್ 2ರಂದು ಒಂದು ಸುತ್ತಿನ ಮಾತುಕತೆ ನಡೆದಿದ್ದು, ಏಪ್ರಿಲ್ 11ರವರೆಗೂ ಮಾತುಕತೆ ಮುಂದುವರಿಯಲಿದೆ.

ಈಗಾಗಲೇ ನೂತನ ಪಕ್ಷದ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ಮುಶರಫ್ ಅವರ ಅನಧಿಕೃತ ವಕ್ತಾರ ಬ್ಯಾರಿಸ್ಟರ್ ಸೈಫ್ ಈ ಸಭೆಗಳನ್ನು ಸಂಘಟಿಸಿದ್ದಾರೆ.

ತನ್ನ ಮುಂದಿನ ನಡೆಯನ್ನು ನಿರ್ಧರಿಸಲಿರುವ ಮುಶರಫ್ ಯುಎಇಯಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ.

ಮುಶರಫ್ ಅವರ ನೂತನ ಪಕ್ಷದ ನೋಂದಣಿಗಾಗಿ ಸಲ್ಲಿಸಿರುವ ಅರ್ಜಿಯನ್ನು ಪಾಕಿಸ್ತಾನ ಚುನಾವಣಾ ಆಯೋಗವು ಸ್ವೀಕರಿಸಿದೆ ಎಂದೂ ವರದಿಗಳು ಹೇಳಿವೆ.

ಮುಶರಫ್ ಪಾಕಿಸ್ತಾನಕ್ಕೆ ವಾಪಸಾಗಲಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಜನರಲ್ ರಷೀದ್ ಖುರೇಷಿ, ಮಾಜಿ ಅಧ್ಯಕ್ಷರು ಮರಳಿ ಹೊಸ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

ಮುಶರಫ್ ಅವರ ಸಾರ್ವಜನಿಕರಿಂದ ಸಿಗುತ್ತಿರುವ ಭಾರೀ ಬೆಂಬಲದಿಂದ ಸಂತುಷ್ಟಗೊಂಡಿದ್ದಾರೆ. ಅವರು ಎಪಿಎಂಎಲ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ಖುರೇಷಿ ಹೇಳಿದ್ದಾರೆ.

ಮುಶರಫ್ ಅವರು ಇನ್ನೂ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಿರ್ಧರಿಸಿಲ್ಲ. ಅವರು ಪಾಕಿಸ್ತಾನದ ರಾಜಕೀಯಕ್ಕೆ ಪ್ರವೇಶಿಸಲು ಉತ್ತಮ ಸಮಯಕ್ಕಾಗಿ ಕಾಯುತ್ತಿದ್ದಾರೆ. ಫೇಸ್ ಬುಕ್‌ನಲ್ಲಿ ಪಾಸ್ದಾರನ್-ಇ-ಪಾಕಿಸ್ತಾನದ 1,55,000 ಹಾಗೂ 1,50,000 ಪ್ರೇಮಿ ಸದಸ್ಯರಿದ್ದಾರೆ. ಮುಶರಫ್ ಜನರ ನಡುವೆ ಎಷ್ಟು ಜನಪ್ರಿಯರು ಎಂಬುದನ್ನು ಇದು ತೋರಿಸುತ್ತಿದೆ ಎಂದು ಖುರೇಷಿ ತಿಳಿಸಿದ್ದಾರೆಂದು 'ದಿ ನೇಷನ್' ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ