ರೆಸ್ಟೋರೆಂಟ್‌ವೊಂದರಲ್ಲಿ ಚುಂಬಿಸಿದ್ದ ಬ್ರಿಟಿಷ್ ಜೋಡಿಗೆ ನೀಡಲಾಗಿರುವ ಒಂದು ತಿಂಗಳ ಶಿಕ್ಷೆಯನ್ನು ಇಲ್ಲಿನ ಉಚ್ಚನ್ಯಾಯಾಲಯ ಎತ್ತಿಹಿಡಿಯುವ ಮೂಲಕ ದೃಢಪಡಿಸಿದೆ.
ಇಂಗ್ಲೆಂಡ್‌ನ ಅಯ್ಮನ್ ನಜಾಫಿ(24) ಚಾರ್ಲೊಟ್ ಆಡಮ್ಸ್(25) ಎಂಬುವರು ರೆಸ್ಟೋರೆಂಟ್‌ನಲ್ಲಿ ಒಬ್ಬರಿಗೊಬ್ಬರು ಚುಂಬಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಕಳೆದ ನವೆಂಬರ್ ತಿಂಗಳಿನಲ್ಲಿ ಇಬ್ಬರನ್ನೂ ಬಂಧಿಸಿದ್ದರು. ಅಲ್ಲದೇ ಮದ್ಯಪಾನ ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ನಡೆದುಕೊಂಡಿದ್ದಕ್ಕೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.
ಚಂಬನದ ಜೋಡಿಗೆ ಕೆಳಹಂತದ ಕೋರ್ಟ್ ಒಂದು ತಿಂಗಳ ಶಿಕ್ಷೆ. ಗಡಿಪಾರು ಹಾಗೂ ಮದ್ಯಸೇವನೆಗಾಗಿ 270ಡಾಲರ್ ದಂಡ ವಿಧಿಸಲಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಅವರು ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಉಚ್ಚನ್ಯಾಯಾಲಯ ಕೂಡ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ಇತ್ತೀಚೆಗಷ್ಟೇ ಅಶ್ಲೀಲ ಸಂದೇಶ ರವಾನಿಸಿದ್ದಕ್ಕಾಗಿ ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಈ ಪ್ರಕರಣ ನಡೆದಿದೆ.