ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾವೇ ದಾಳಿ ನಡೆಸಿದ್ದು; ಅಮೆರಿಕನ್‌ರನ್ನ ಬಿಡಲ್ಲ: ತಾಲಿಬಾನ್ (Pakistan | Peshawar | US consulate | Taliban Pakistan)
Bookmark and Share Feedback Print
 
ಪೇಶಾವರದಲ್ಲಿರುವ ಅಮೆರಿಕದ ದೂತಾವಾಸ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಸರಣಿ ಬಾಂಬ್ ಸ್ಫೋಟ ನಡೆಸಿದ್ದು ತಾವೇ ಎಂಬುದಾಗಿ ಪಾಕಿಸ್ತಾನದ ತಾಲಿಬಾನ್ ಉಗ್ರಗಾಮಿ ಸಂಘಟನೆ ಹೊಣೆಹೊತ್ತುಕೊಂಡಿದ್ದು, ಅಮೆರಿಕನ್‌ರ ವಿರುದ್ಧ ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿಯೂ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ.

ಹೌದು, ಅಮೆರಿಕದ ದೂತಾವಾಸ ಕಚೇರಿ ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ. ಇದು ಡ್ರೋನ್ ದಾಳಿಗೆ ಪ್ರತೀಕಾರ ಎಂದು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್‌ನ(ಟಿಟಿಪಿ) ವಕ್ತಾರ ಅಜಾಮ್ ತಾರಿಕ್ ರಹಸ್ಯ ಸ್ಥಳದಿಂದ ದೂರವಾಣಿ ಮೂಲಕ ಮಾಧ್ಯಮವೊಂದಕ್ಕೆ ತಿಳಿಸಿದ್ದಾನೆ.

ನಾವು ಈ ಮೊದಲೇ ತಿಳಿಸಿದ್ದೇವೆ, ನಮ್ಮಲ್ಲಿ 2,800ರಿಂದ 3ಸಾವಿರ ಆತ್ಮಹತ್ಯಾ ಬಾಂಬರ್‌ಗಳಿದ್ದಾರೆಂದು. ಹಾಗಾಗಿ ನಾವು ಮತ್ತಷ್ಟು ದಾಳಿಗಳನ್ನು ನಡೆಸುತ್ತೇವೆ. ಅಮೆರಿಕನ್‌ರು ಯಾವ ಪ್ರದೇಶದಲ್ಲಿದ್ದಾರೋ ಅಲ್ಲೆಲ್ಲಾ ನಮ್ಮ ಪ್ರತೀಕಾರದ ದಾಳಿ ನಡೆಯಲಿದೆ ಎಂದು ಘೋಷಿಸಿದ್ದಾನೆ.

ಸೋಮವಾರ ಅಮೆರಿಕದ ದೂತಾವಾಸ ಹಾಗೂ ವಾಯುವ್ಯ ಪ್ರಾಂತ್ಯದ ಡೀರ್‌ನಲ್ಲಿ ನಡೆಯುತ್ತಿದ್ದ ರಾಜಕೀಯ ಸಮಾವೇಶದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ನಡೆಸುವ ಮೂಲಕ 43ಮಂದಿ ಬಲಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ