ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾಸ್ಕೋದ 2ನೇ ಆತ್ಮಹತ್ಯಾ ಬಾಂಬರ್ ಟೀಚರ್! (Moscow suicide bomber | teacher | Maryam Sharilova | female suicide bomber)
Bookmark and Share Feedback Print
 
ರಷ್ಯಾದ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿನ ಎರಡನೇ ಆತ್ಮಹತ್ಯಾ ಬಾಂಬರ್ ತನ್ನ ಮಗಳು (28) ಎಂಬುದಾಗಿ ವ್ಯಕ್ತಿಯೊಬ್ಬ ಬಾಯ್ಬಿಟ್ಟಿರುವುದಾಗಿ ರಷ್ಯಾದ ಮಾಧ್ಯಮವೊಂದರ ವರದಿ ತಿಳಿಸಿದ್ದು, ಆಕೆ ವೃತ್ತಿಯಲ್ಲಿ ಟೀಚರ್ ಆಗಿದ್ದಾಳೆ ಎಂದು ಹೇಳಿದೆ.

ಮಾರಿಯಾಮ್ ಶಾರಿಲೋವಾ(28) ಆತ್ಮಹತ್ಯಾ ಬಾಂಬರ್ ಆಗಿದ್ದಾಳೆ ಎಂದು ಆಕೆಯ ತಂದೆ ರಾಸುಲ್ ಮಾಗೋವೆಡೋವ್ ತಿಳಿಸಿರುವುದಾಗಿ ನೋವಾಯಾ ಗಾಜೆಟಾ ವರದಿ ತಿಳಿಸಿದೆ. ಆತ್ಮಹತ್ಯಾ ಬಾಂಬರ್ ದಾಳಿಯ ಸಂದರ್ಭದಲ್ಲಿ ಸೆರೆಹಿಡಿದಿರುವ ಫೋಟೋಗ್ರಾಫ್ಸ್ ನೋಡಿದಾಗ ಆಕೆ ತನ್ನ ಮಗಳಂತೆಯೇ ಇರುವುದಾಗಿ ಶಂಕಿಸಿರುವ ತಂದೆ, ಕಳೆದ ಬಾರಿ ಆಕೆಯನ್ನು ನೋಡಿದಾಗ ಕೂಡ ಕೆಂಪು ಬಣ್ಣದ ಮುಖಗವಸು ಹಾಕಿದ್ದಳು ಎಂದು ವಿವರಿಸಿದೆ.

ಡಾಗೆಸ್ತಾನ್‌ನ ದಕ್ಷಿಣ ಪ್ರಾಂತ್ಯದಲ್ಲಿ ಮಾರ್ಚ್ 29ರ ದಾಳಿ ನಡೆಯುವ ಮುನ್ನವೇ ಆಕೆ ಮನೆಯಿಂದ ನಾಪತ್ತೆಯಾಗಿದ್ದಳು ಎಂದು ವರದಿ ಹೇಳಿದೆ. ಇಬ್ಬರು ಮಹಿಳಾ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ 40 ಮಂದಿ ಸಾವನ್ನಪ್ಪಿದ್ದರು.

ಅಲ್ಲದೇ ಮತ್ತೊಂದು ಆತ್ಮಹತ್ಯಾ ಬಾಂಬರ್ ಅನ್ನು 17 ರ ಹರೆಯದ ವಿಧವೆ ಎಂಬುದಾಗಿ ತನಿಖೆಯಿಂದ ತಿಳಿದುಬಂದಿರುವುದಾಗಿ ಇತ್ತೀಚೆಗಷ್ಟೇ ರಷ್ಯಾದ ಅಧಿಕಾರಿಗಳು ತಿಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ