ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಂಬ್ಯುಲೆನ್ಸ್‌ನಲ್ಲಿ ಮನೆಗೆ ಹಸು ಸಾಗಾಟ; ವೈದ್ಯ ಅಮಾನತು! (Pakistan | transport calf | Doctor suspended | Punjab province)
Bookmark and Share Feedback Print
 
ಮಾರ್ಕೆಟ್‌ನಿಂದ ಹಸುವನ್ನು ಖರೀದಿಸಿ ಅಂಬ್ಯೂಲೆನ್ಸ್‌ನಲ್ಲಿ ಮನೆಗೆ ಸಾಗಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವೈದ್ಯರೊಬ್ಬರನ್ನು ಸೇವೆಯಿಂದ ಅಮಾನತು ಮಾಡಿದ ಘಟನೆ ನಡೆದಿದೆ.

ಪಂಜಾಬ್ ಪ್ರಾಂತ್ಯದ ಗುಜ್ರಾತ್ ನಗರದಿಂದ ಸುಮಾರು 30ಕಿ.ಮೀ.ದೂರದಲ್ಲಿರುವ ಗ್ರಾಮೀಣ ಪ್ರದೇಶ ಟಾಂಡಾ ಹೆಲ್ತ್ ಸೆಂಟರ್‌ನ ವೈದ್ಯರೊಬ್ಬರು ಕುಂಜಾ ಮಾರ್ಕೆಟ್‌ನಿಂದ ಹಸುವನ್ನು ಅಂಬ್ಯುಲೆನ್ಸ್‌ನಲ್ಲಿ ತನ್ನ ಮನೆಗೆ ಸಾಗಿಸಿದ್ದರು.

ಆದರೆ ವೈದ್ಯರ ಗ್ರಹಚಾರ ನೆಟ್ಟಗಿರಲಿಲ್ಲವಾಗಿತ್ತು. ಹಸುವನ್ನು ಅಂಬ್ಯುಲೆನ್ಸ್‌ನಲ್ಲಿ ಹಾಕಿಕೊಂಡು ಮನೆಯತ್ತ ಸಾಗುತ್ತಿದ್ದ ವೇಳೆ ಪೊಲೀಸರು ಅಂಬ್ಯುಲೆನ್ಸ್‌ನ್ನು ತಡೆದು ತಪಾಸಣೆ ಮಾಡಿದಾಗ, ವೈದ್ಯರ ಮುಖ ಬಿಳುಚಿಕೊಂಡಿತ್ತು. ನಂತರ ಸರ್ಕಾರಿ ಅಂಬ್ಯುಲೆನ್ಸ್‌ನಲ್ಲಿ ಹಸು ಸಾಗಾಟ ಮಾಡಿದ ಆರೋಪದಲ್ಲಿ ವೈದ್ಯರನ್ನು ಅಮಾನತು ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಸರ್ದಾರ್ ಅಕ್ರಂ ಜಾವೇದ್ ಅವರು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದರು.

ಘಟನೆ ಬಗ್ಗೆ ವೈದ್ಯರನ್ನು ವಿಚಾರಣೆಗೊಳಪಡಿಸಿದ ನಂತರ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಎಕ್ಸಿಕ್ಯೂಟಿವ್ ಡಿಸ್ಟ್ರಿಕ್ಟ್ ಅಧಿಕಾರಿ ಮುನೀರ್ ಅಹ್ಮದ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ