ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಸಿಕೋ, ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ (Mexico | California | Arizona | 7.2-magnitude | earthquake)
Bookmark and Share Feedback Print
 
ಕಳೆದ ಒಂದು ದಶಕಗಳಲ್ಲಿಯೇ ಕಾಣದ ಪ್ರಬಲ ಭೂಕಂಪ ಮೆಕ್ಸಿಕೋದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ್ದು, ಲಕ್ಷಾಂತರ ಜನರು ಭಯದಿಂದ ತತ್ತರಿಸಿ ಹೋಗಿರುವ ಘಟನೆ ಭಾನುವಾರ ಸಂಭವಿಸಿದ್ದು, ಮೆಕ್ಸಿಕೋ, ಕ್ಯಾಲಿಫೋರ್ನಿಯಾ ಹಾಗೂ ಅರಿಜೋನಾದ ಜನರು ಇದರಿಂದ ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ಸಾವಿರಾರು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಶಂಕಿಸಿದ್ದಾರೆ.

ಮೆಕ್ಸಿಕೋದ ಸುಮಾರು 60ಕಿ.ಮೀ.ದೂರದಲ್ಲಿರುವ ಆಗ್ನೇಯ ಭಾಗದ ಮೆಕ್ಸಿಕಾಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿರುವುದಾಗಿ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ.

ಅದರ ಬೆನ್ನಿಗೇ 5.1, 4.5 ಹಾಗೂ 4.3ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸುವ ಮೂಲಕ ಜನರು ಭಯಭೀತರಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಏಕಾಏಕಿ ಸಂಭವಿಸಿದ ಪ್ರಬಲ ಭೂಕಂಪನದ ಶಬ್ದ ಸುಮಾರು 20ಮಿಲಿಯನ್ ಲಕ್ಷ ಜನರಿಗಾದ್ರೂ ಕೇಳಿರಬಹುದು ಎಂದು ಯುಎಸ್‌ಜಿಎಸ್ ಸೆಸ್‌ಮೋಲೋಜಿಸ್ಟ್ ಲೂಸಿ ಜೋನ್ಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮೆಕ್ಸಿಕಾಲಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ ಮೆಕ್ಸಿಕೋ ತತ್ತರಿಸಿಹೋಗಿದ್ದು, ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ.

ಘಟನೆಯಲ್ಲಿ ಗಾಯಗೊಂಡವರನ್ನು ಮೆಕ್ಸಿಕಾಲಿ ಜನರಲ್ ಹಾಸ್ಪಿಟಲ್‌ಗೆ ದಾಖಲಿಸಲಾಗಿದೆ. ಕಟ್ಟಡಗಳಿಗೆ ವಿದ್ಯುತ್, ನೀರು ಸರಬರಾಜು ಸ್ಥಗಿತಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದೂರವಾಣಿ ಸಂಪರ್ಕ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ