ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೊನ್ಸೇಕಾ ಹತ್ಯೆಗೆ ಎಲ್‌ಟಿಟಿಇ, ಶ್ರೀಲಂಕಾ ಸರಕಾರ ಯತ್ನ? (LTTE | Sri Lanka | Gen Sarath Fonseka | Vijitha Herath)
Bookmark and Share Feedback Print
 
ಶ್ರೀಲಂಕಾ ಸರಕಾರ ಮತ್ತು ಎಲ್‌ಟಿಟಿಇ ಅಳಿದುಳಿದ ಪಡೆಗಳು ಪ್ರಸಕ್ತ ಮಿಲಿಟರಿ ವಶದಲ್ಲಿರುವ ಜನರಲ್ ಸರತ್ ಫೊನ್ಸೇಕಾ ಅವರನ್ನು ಹತ್ಯೆಗೈಯಲು ಕಾತರರಾಗಿದ್ದರು ಎಂದು ಮಾಜಿ ಸೇನಾ ಮುಖ್ಯಸ್ಥರ ಮೈತ್ರಿ ಪಡೆ ಆರೋಪಿಸಿದೆ.

ಫೊನ್ಸೇಕಾ ಅವರನ್ನು ಹತ್ಯೆ ಮಾಡಲು ಎಲ್‌ಟಿಟಿಇಯ ಉಳಿದಿದ್ದ ಪಡೆ ಬಯಸಿತ್ತು. ಅದೇ ಹೊತ್ತಿಗೆ ಸರಕಾರವು ಕೂಡ ಅಂತಹುದೇ ಚಿಂತನೆಗಳನ್ನು ನಡೆಸುತ್ತಿತ್ತು ಎಂದು ಡೆಮಾಕ್ರಟಿಕ್ ನ್ಯಾಷನಲ್ ಅಲಯೆನ್ಸ್ ಮುಖ್ಯಸ್ಥ ವಿಜಿತಾ ಹೇರಾತ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ಎಲ್‌ಟಿಟಿಇ ಉಗ್ರ ಸಂಘಟನೆಯನ್ನು ನಾಶ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಫೊನ್ಸೇಕಾ ಅವರನ್ನು ಮುಗಿಸಲು ಸಂಘಟನೆ ಯತ್ನಿಸಿದೆ. ಅವರು ಆತ್ಮಹತ್ಯಾ ಬಾಂಬರುಗಳು ಕಳುಹಿಸುವುದು ಮುಂತಾದ ಮಾರ್ಗಗಳ ಮೂಲಕ ಫೋನ್ಸೇಕಾರನ್ನು ಹತ್ಯೆಗೈಯಲು ಯತ್ನಿಸಿದ್ದರು. ಎಲ್‌ಟಿಟಿಇಯನ್ನು ಧ್ವಂಸಗೊಳಿಸಿದ ನಂತರ ಅದರ ಅಳಿದುಳಿದ ಕಾರ್ಯಕರ್ತರು ಜನರಲ್ ವಿರುದ್ಧ ದ್ವೇಷ ಸಾಧಿಸಲು ಕಾಯುತ್ತಿದ್ದಾರೆ ಎಂದು ಹೇರಾತ್ ಆರೋಪ ಮಾಡಿದ್ದಾರೆ.

ಅದೇ ಹೊತ್ತಿಗೆ ಎಲ್‌ಟಿಟಿಇ ಬಂಧಿತ ನಾಯಕ ಕೆ. ಪದ್ಮನಾಥನ್ ಮುಂದಿಡುವ ಎಲ್ಲಾ ಬೇಡಿಕೆಗಳನ್ನು ಕೂಡ ಸರಕಾರ ಈಡೇಸುತ್ತಿದೆ ಎಂಬ ಗಂಭೀರ ಆರೋಪವನ್ನು ಕೂಡ ಅವರು ಮಾಡಿದ್ದಾರೆ. ಮುಗಿಸಲ್ಪಟ್ಟಿರುವ ಸಂಘಟನೆಯ ಆಸ್ತಿ ಮತ್ತು ಚಿನ್ನದ ಮಾಹಿತಿ ಆತನಲ್ಲಿದೆ ಎಂದೂ ಹೇರಾತ್ ತಿಳಿಸಿದ್ದಾರೆ.

ಫೊನ್ಸೇಕಾ ಅವರನ್ನು ಸುದೀರ್ಘ ಅವಧಿಗಳ ಕಾಲ ಬಂಧನದಲ್ಲಿಡಲು ಯತ್ನಿಸುತ್ತಿದೆ ಎಂಬ ಆರೋಪವನ್ನೂ ಇದೇ ಸಂದರ್ಭದಲ್ಲಿ ಮಾಡಿರುವ ಹೇರಾತ್, ಸರಕಾರ ಅಡ್ಡ ದಾರಿಯ ಮೂಲಕ ಯಶಸ್ಸು ಗಳಿಸಲು ಯತ್ನಿಸುತ್ತಿದೆ ಎಂದಿದ್ದಾರೆ.

ಸೇನಾ ಮುಖ್ಯಸ್ಥರಾಗಿದ್ದ ವೇಳೆ ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆ ಮತ್ತು ಅವರ ಕುಟುಂಬದವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಫೊನ್ಸೇಕಾ ಪ್ರಸಕ್ತ ಕೋರ್ಟ್ ಮಾರ್ಷಲ್ ಎದುರಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ