ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ ಗಣಿ ಸ್ಫೋಟಕ್ಕೆ ಏಳು ಬಲಿ, 20 ಮಂದಿ ನಾಪತ್ತೆ (US mine blast | West Virginia | Upper Big Branch | Barack Obama)
Bookmark and Share Feedback Print
 
ಪಶ್ಚಿಮ ವರ್ಜೀನಿಯಾದ ಕಲ್ಲಿದ್ದಲು ಗಣಿಯೊಂದರಲ್ಲಿ ಸೋಮವಾರ ನಡೆದ ಸ್ಫೋಟದಲ್ಲಿ ಕನಿಷ್ಠ ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, 20 ಮಂದಿ ಕಾಣೆಯಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕಾದಲ್ಲಿ ನಡೆದ ಬಹುದೊಡ್ಡ ಗಣಿ ದುರಂತಗಳಲ್ಲಿ ಇದೂ ಒಂದು ಎಂದು ವರದಿಗಳು ತಿಳಿಸಿವೆ.

ಚಾರ್ಲೆಸ್ಟನ್ ದಕ್ಷಿಣಕ್ಕೆ 50 ಕಿಲೋ ಮೀಟರ್ ದೂರದಲ್ಲಿರುವ ಮೌಂಟಕೋಲ್‌ನಲ್ಲಿನ 'ಮಸ್ಸೇ ಎನರ್ಜಿ' ಉಪ ಸಂಸ್ಥೆ 'ಕೋಲ್ ಕಂಪನಿ'ಯಿಂದ ನಡೆಸಲ್ಪಡುವ 'ಅಪ್ಪರ್ ಬಿಗ್ ಬ್ರಾಂಚ್' ಗಣಿಯಲ್ಲಿ ಅಪರಾಹ್ನದ ಕೆಲಸದ ಮುಕ್ತಾಯ ಸಮಯದಲ್ಲಿ ಈ ಸ್ಪೋಟ ನಡೆದಿದೆ.

ಸ್ಥಳದಲ್ಲಿ ಸ್ಫೋಟ ನಡೆದಿರುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. ನಮ್ಮ ಪ್ರಕಾರ ಇದುವರೆಗೆ ಎಂಟು ಸಾವುಗಳು ಘಟಿಸಿವೆ. ಇನ್ನೂ ಹೆಚ್ಚು ಅಂದರೆ ಸುಮಾರು 20ರಷ್ಟು ಪ್ರಾಣ ಹಾನಿ ಸಂಭವಿಸಿರುವ ಅಥವಾ ತೀವ್ರವಾಗಿ ಗಾಯಗೊಂಡಿರುವ ಸಾಧ್ಯತೆಗಳಿವೆ. 21-23 ಮಂದಿ ಇನ್ನೂ ಭೂಗತರಾಗಿದ್ದಾರೆ ಎಂದು ರಾಲಿಗ್ ಕೌಂಟಿಯಲ್ಲಿನ ತುರ್ತು ಸೇವೆಗಳ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅವರು ಸಿಲುಕಿಕೊಂಡಿದ್ದಾರೆಯೇ ಅಥವಾ ಲೆಕ್ಕದಿಂದ ತಪ್ಪಿಸಿಕೊಂಡಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ ನಮ್ಮ ಸಿಬ್ಬಂದಿಗಳಿಗೆ ಅವರನ್ನು ಪತ್ತೆ ಹಚ್ಚುವುದು ಇದುವರೆಗೆ ಸಾಧ್ಯವಾಗಿಲ್ಲ ಎಂದು ವಿವರಣೆ ನೀಡಿದರು.

ಮತ್ತೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಈ ವಕ್ತಾರರು, ಸಾವನ್ನಪ್ಪಿದವರ ಸಂಖ್ಯೆ ಏಳು ಮಾತ್ರ, ಯಾವುದನ್ನೂ ತಕ್ಷಣಕ್ಕೆ ಖಚಿತಪಡಿಸುವುದು ಸಾಧ್ಯವಿಲ್ಲ ಎಂದಿದ್ದಾರೆ.

ಘಟನೆ ನಡೆದ ತಕ್ಷಣ ಅಧ್ಯಕ್ಷ ಬರಾಕ್ ಒಬಾಮಾ ದೂರವಾಣಿ ಮೂಲಕ ಪಶ್ಚಿಮ ವರ್ಜೀನಿಯಾ ರಾಜ್ಯಪಾಲ ಜೋಯ್ ಮಾಂಕಿನ್ ಅವರಲ್ಲಿ ಮಾತುಕತೆ ನಡೆಸಿದ್ದ, ಕರಾಳ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಕಾರ್ಯಕ್ಕೆ ಯಾವೆಲ್ಲ ತುರ್ತು ಅಗತ್ಯಗಳು ಬೇಕಿದೆಯೋ, ಎಲ್ಲಾ ಸಹಕಾರಗಳನ್ನು ನೀಡಲು ಫೆಡರಲ್ ಸರಕಾರ ಸಿದ್ಧವಾಗಿದೆ ಎಂದು ಒಬಾಮಾ ಅವರು ಮಾಂಕಿನ್ ಅವರಿಗೆ ತಿಳಿಸಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ