ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ರಹಸ್ಯ ದಾಖಲೆಗಳಿಗೆ ಚೀನಾ ಹ್ಯಾಕರುಗಳಿಂದ ಕನ್ನ! (Indian missile | Chinese hackers | Indian Defence Ministry | Shadow Network)
Bookmark and Share Feedback Print
 
ಭಾರತೀಯ ಕ್ಷಿಪಣಿ ಮತ್ತು ಯುದ್ಧ ಸನ್ನದ್ಧ ಸೈನ್ಯ ವ್ಯವಸ್ಥೆಗಳಲ್ಲಿ ಭಾರೀ ಲೋಪದೋಷಗಳಿರುವ ಸಾಧ್ಯತೆಗಳು ಕಂಡು ಬಂದಿದ್ದು, ಭಾರತದ ರಕ್ಷಣಾ ಸಚಿವಾಲಯ ಮತ್ತು ವಿಶ್ವದಾದ್ಯಂತ ಹೊಂದಿರುವ ಕಚೇರಿಗಳಿಂದ ಮಹತ್ವದ ರಹಸ್ಯ ದಾಖಲೆಗಳನ್ನು ಚೀನಾ ಹ್ಯಾಕರುಗಳು ಸೈಬರ್ ಮೂಲಕ ಪಡೆದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಇತ್ತೀಚೆಗಷ್ಟೇ ಸೇನೆಗೆ ಪರಿಚಯಿಸಲಾಗಿದ್ದ ಫಿರಂಗಿ ಪಡೆ 'ಶಕ್ತಿ'ಯ ವಿವರಗಳು ಮತ್ತು ಭಾರತೀಯ ಸೇನೆಯ ನಿಯಂತ್ರಣಾ ವ್ಯವಸ್ಥೆ ಹಾಗೂ 'ಉಕ್ಕಿನ ಶಿಖರ' ಎಂದು ಕರೆಯಲಾಗುವ ದೇಶದ ನೂತನ ಚರ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಮಾಹಿತಿಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.

'ಮೋಡದೊಳಗಿನ ನೆರಳು' ಎಂದು ಹೆಸರಿಸಲಾಗಿರುವ ಈ ವರದಿಯನ್ನು ಟೊರಂಟೋ ವಿಶ್ವವಿದ್ಯಾಲಯದ ಕೆನಡಾ ಮತ್ತು ಅಮೆರಿಕಾ ಅಧ್ಯಯನಕಾರರು ಸಿದ್ಧಪಡಿಸಿದ್ದು, 'ಜಾಲದ ಕುರುಹು' ಎಂಬ ಈ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಸರಕಾರದ ಉನ್ನತ ರಹಸ್ಯ ಮಾಹಿತಿಗಳನ್ನು ಚೀನಾ ಕಳ್ಳತನ ಮಾಡಿರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಸರಕಾರ, ಉದ್ಯಮ, ಶೈಕ್ಷಣಿಕ ಮತ್ತು ಇತರ ಕಂಪ್ಯೂಟರ್ ವ್ಯವಸ್ಥೆಗಳಿಗೆ ಕನ್ನ ಹಾಕಲಾಗಿದ್ದು, ಚೀನಾದಲ್ಲಿನ ಸರ್ವರ್‌ಗಳಿಂದ ವ್ಯವಸ್ಥಿತವಾಗಿ ಸೈಬರ್ ಮೂಲಕ ಬೇಹುಗಾರಿಕೆ ನಡೆಸಲಾಗಿದೆ ಎಂದು ಸುಮಾರು ಎಂಟು ತಿಂಗಳುಗಳ ಕಾಲ ತನಿಖೆಗಳನ್ನು ನಡೆಸಿ ಸಿದ್ಧಪಡಿಸಿರುವ ವರದಿ ಹೇಳಿದೆ.

ಭಾರತ ಸರಕಾರಕ್ಕೆ ಸಂಬಂಧಪಟ್ಟ ಭಾರತ ಮತ್ತು ವಿಶ್ವದೆಲ್ಲೆಡೆಯಿರುವ ಕಚೇರಿಗಳಿಂದಲೂ ಮಾಹಿತಿ ಹ್ಯಾಕ್ ಮಾಡಲಾಗಿದ್ದು, ಭಾರತವು ತೀವ್ರ ನಿರ್ಲಕ್ಷ್ಯ ವಹಿಸಿತ್ತು ಎಂದು ವರದಿ ಕಂಡುಕೊಂಡಿದೆ.

ಬೆಲ್ಜಿಯಂ, ಸೆರ್ಬಿಯಾ, ಜರ್ಮನಿ, ಇಟಲಿ, ಕುವೈಟ್, ಅಮೆರಿಕಾ, ಜಿಂಬಾಬ್ವೆ, ಸಿಪ್ರಸ್ ಮತ್ತು ಇಂಗ್ಲೆಂಡ್‌ಗಳಲ್ಲಿರುವ ಭಾರತೀಯ ದೂತವಾಸ ಕಚೇರಿಗಳ ಕಂಪ್ಯೂಟರುಗಳಿಂದ ಮಾಹಿತಿಗಳನ್ನು ಸೈಬರ್ ಮೂಲಕ ಕಳ್ಳತನ ಮಾಡಲಾಗಿದೆ.

ದಲೈ ಲಾಮಾ ಅವರ ಕಚೇರಿಗಳು ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಪ್ರತಿಷ್ಠಾನಗಳ ದಾಖಲೆಗಳನ್ನು ಕೂಡ ಚೀನಾ ಹ್ಯಾಕ್ ಮಾಡಿದೆ ಎಂದು ಈ ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ