ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಗ್ಧಾದ್ ಆತ್ಮಹತ್ಯಾ ಬಾಂಬ್ ದಾಳಿಗೆ 15ಕ್ಕೂ ಹೆಚ್ಚು ಬಲಿ (Baghdad blast | Haifa street | massive vehicle bomb | Hoshyar Zebari)
Bookmark and Share Feedback Print
 
ಬಾಗ್ಧಾದ್ ನಗರದಾದ್ಯಂತ ಮಂಗಳವಾರ ನಡೆದ ಆರು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 75ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾಕ್ ರಾಜಧಾನಿಯಲ್ಲಿ ಆತ್ಮಹತ್ಯಾ ಬಾಂಬರುಗಳು ನಡೆಸಿದ ಈ ದಾಳಿಗಳಲ್ಲಿ ಏಳು ವಸತಿ ಕಟ್ಟಡಗಳು ಧ್ವಂಸಗೊಂಡಿವೆ. ಘಟನೆಯಿಂದ ಅಪಾರ ನಷ್ಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.

ಸಾಲ್ಹಿಯೇ ಪಕ್ಕದಲ್ಲಿನ ಹೈಫಾ ಬೀದಿಯಲ್ಲಿರುವ ಲೋಕೋಪಯೋಗಿ ಸಚಿವಾಲಯದ ಸಮೀಪವೇ ಸ್ಫೋಟ ಸಂಭವಿಸಿದ್ದು, ತಕ್ಷಣವೇ ಆಂಬುಲೆನ್ಸ್‌ಗಳು ಸೈರನ್ ಮೊಳಗಿಸುತ್ತಾ ಬಂದವು. ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಭಾರೀ ಬಾಂಬ್ ದಾಳಿಗೊಳಗಾಗಿದ್ದ ಪ್ರದೇಶದಲ್ಲಿರುವ ಕಾನೂನು ಸಚಿವಾಲಯದ ಪಕ್ಕದಲ್ಲಿನ ಲೋಕೋಪಯೋಗಿ ಸಚಿವಾಲಯದ ಸಮೀಪ ದುರ್ಘಟನೆಯಿಂದಾಗಿ ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿತ್ತು.

ಭಾನುವಾರವಷ್ಟೇ ನಡೆದಿದ್ದ ಮೂರು ಆತ್ಮಹತ್ಯಾ ಬಾಂಬ್ ದಾಳಿಗಳಲ್ಲಿ 30 ಮಂದಿ ಸಾವನ್ನಪ್ಪಿ, 200 ಮಂದಿ ಗಾಯಗೊಂಡಿದ್ದರು.

ಕಳೆದ ತಿಂಗಳು ನಡೆದಿರುವ ಚುನಾವಣೆಯ ನಂತರ ಹೊಸ ಸರಕಾರ ಇನ್ನಷ್ಟೇ ಅಸ್ತಿತ್ವಕ್ಕೆ ಬರಬೇಕಿದೆ. ಆದರೆ ಇದನ್ನು ವಿರೋಧಿಸಿ ಭಾರೀ ದಾಳಿಗಳನ್ನು ನಡೆಸಲಾಗುತ್ತಿದೆ. ಹಾಗಾಗಿ ಇದು ರಾಜಕೀಯ ದಾಳಿಗಳು. ಸರಕಾರದ ಪ್ರಕ್ರಿಯೆಗಳನ್ನು ವಿರೋಧಿಸುತ್ತಾ, ಭಯೋತ್ಪಾದಕರು ಇನ್ನೂ ಅಸ್ತಿತ್ವದಲ್ಲಿದ್ದಾರೆ ಎಂಬ ಸಂದೇಶವನ್ನು ರವಾನಿಸುವ ಯತ್ನವಿದು ಎಂದು ವಿದೇಶಾಂಗ ಸಚಿವ ಹೊಶ್ಯಾರ್ ಜೆಬರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ