ಪೇಶಾವರದಲ್ಲಿನ ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿರಿಸಿಕೊಂಡು ನಡೆಸಿರುವ ದಾಳಿಯ ಹಿಂದೆ ಅಲ್ ಖಾಯಿದಾ ಕೈವಾಡ ಇರುವುದಾಗಿ ಪಾಕಿಸ್ತಾನದ ಸೆನೆಟರ್ ಆರೋಪಿಸಿದ್ದಾರೆ.
ಪಾಕಿಸ್ತಾನ ಅಧ್ಯಕ್ಷರಾಗಿ ಅಸಿಫ್ ಅಲಿ ಜರ್ದಾರಿ ಅವರು ಆಯ್ಕೆಯಾದ ಸಂದರ್ಭದಲ್ಲಿ ಮೊದಲ ಬಾರಿಗೆ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿಯೂ ಇಂತಹದ್ದೇ ದಾಳಿ ನಡೆದಿದ್ದನ್ನು ನೆನಪಿಸಿಕೊಳ್ಳಿ ಎಂದು ಅವಾಮಿ ನ್ಯಾಷನಲ್ ಪಾರ್ಟಿಯ (ಎಎನ್‌ಪಿ) ಹಿರಿಯ ಉಪಾಧ್ಯಕ್ಷ ಹಾಜಿ ಅಡೀಲ್ ಮಂಗಳವಾರ ತಿಳಿಸಿದ್ದು, ಅಲ್ ಖಾಯಿದಾ ಉಗ್ರಗಾಮಿಗಳು ಪಾಕಿಸ್ತಾನಿ ತಾಲಿಬಾನ್ ಜೊತೆ ನಿಕಟವಾಗಿರುವುದಾಗಿಯೂ ವಿವರಿಸಿದರು.
ಅದೇ ರೀತಿಯಲ್ಲಿ ಅಲ್ ಖಾಯಿದಾ ಉಗ್ರಗಾಮಿಗಳು ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಮೂಲಕ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ತರಲು ಯತ್ನಿಸುತ್ತಿರುವುದಾಗಿ ಆರೋಪಿಸಿದರು.