ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ವಿದ್ಯಾರ್ಥಿಗೆ ಯುಎಸ್ ಅತ್ಯುನ್ನತ ಸಂಶೋಧನಾ ಪ್ರಶಸ್ತಿ (Indian Student in US | Top US Research Award | Environment | Chemistry | Water Pollution)
Bookmark and Share Feedback Print
 
ನೀರಿನಲ್ಲಿರುವ ವಿಷಾಂಶಯುಕ್ತ ಸೀಸ ಮತ್ತು ತಾಮ್ರವನ್ನು ಪತ್ತೆ ಹಚ್ಚುವಲ್ಲಿ ಹೊಸ ಸಾಧ್ಯತೆಯ ಮೇಲೆ ಬೆಳಕು ಚೆಲ್ಲಲು ಕಾರಣವಾದ ಸಂಶೋಧನೆಯೊಂದನ್ನು ಮಾಡಿರುವ ಭಾರತೀಯ ಪರಿಸರ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಸೂನ್ ಚಟರ್ಜಿ ಅವರಿಗೆ ಅಮೆರಿಕದ ಅತ್ಯುನ್ನತ ಸಂಶೋಧನಾ ಗೌರವ ಲಭಿಸಿದೆ.

ಪೆನ್ಸಿಲ್ವೇನಿಯಾದ ಲೆಹಿಗ್ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಚಟರ್ಜಿ, 2010 ಸಿ.ಎಲೆನ್ ಗಾಂಟೆರ್ ಪಾರಿಸರಿಕ ರಸಾಯನಶಾಸ್ತ್ರ ಪ್ರಶಸ್ತಿಯನ್ನು ಆಗಸ್ಟ್ ತಿಂಗಳಲ್ಲಿ ಬೋಸ್ಟನ್‌ನಲ್ಲಿ ನಡೆಯುವ ಅಮೆರಿಕ ಕೆಮಿಕಲ್ ಸೊಸೈಟಿ ರಾಷ್ಟ್ರೀಯ ಸಮಾವೇಶದಲ್ಲಿ ಪ್ರದಾನ ಮಾಡಲಾಗುತ್ತದೆ.

ಅಮೆರಿಕ ಕಾಂಗ್ರೆಸ್ ಪೋಷಿತ ಸಂಸ್ಥೆಯಾಗಿರುವ ಎಸಿಎಸ್, ವಿಶ್ವದ ಅತಿದೊಡ್ಡ ವೈಜ್ಞಾನಿಕ ಸಂಸ್ಥೆಯಾಗಿದ್ದು, ರಸಾಯನಶಾಸ್ತ್ರಜ್ಞರು, ರಾಸಾಯನಿಕ ವಿಜ್ಞಾನಿಗಳು ಮತ್ತು ಸಂಬಂಧಿತ ವೃತ್ತಿಪರರ ಪರಮೋಚ್ಚ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ